Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

’ಮತದಾನ ಪ್ರಕ್ರಿಯೆಯಲ್ಲಿ ನಗರ ವಾಸಿಗಳ ನಿರಾಸಕ್ತಿ’ ವಿಷಯದ ಕುರಿತು ಕಿರುಚಿತ್ರ ಸ್ಪರ್ಧ!

ಮೈಸೂರು: ರಾಜ್ಯ ಮಟ್ಟಕ್ಕೆ ಹೋಲಿಕೆ ಮಾಡಿದಲ್ಲಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಮತ್ತು ಮೈಸೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಒಂದು ನಿಮಿಷದೊಳಗಿನ ಕಿರುಚಿತ್ರವನ್ನು ಚಿತ್ರೀಕರಿಸಲು ತೀರ್ಮಾನಿಸಿದೆ.

ಕಳೆದ ಬಾರಿಯ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ರ ಚುನಾವಣೆಯಲ್ಲಿ ಶೇಕಡವಾರು ಮತದಾನ ಪ್ರಮಾಣವು ರಾಜ್ಯ ಮಟ್ಟಕ್ಕೆ ಹೋಲಿಕೆ ಮಾಡಿದಲ್ಲಿ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ.

ಇದನ್ನು ಮನಗಂಡ ಚುನಾವಣ ಆಯೋಗವು ಮತದಾನ ಪ್ರಕ್ರಿಯೆಯಲ್ಲಿ ನಗರ ವಾಸಿಗಳ ನಿರಾಸಕ್ತಿ’ ವಿಷಯದ ಕುರಿತು ಕಿರುಚಿತ್ರ ಸ್ಪರ್ಧೆ ಏರ್ಪಡಿಸಿದೆ. ಮತದಾರರ ಸಾಕ್ಷರತಾ ಸಂಘಗಳ ಮುಖೇನ ಎಲ್ಲಾ ಸಾರ್ವಜನಿಕರು ಹಾಗು ಕಾಲೇಜುಗಳ ವಿದ್ಯಾರ್ಥಿಗಳು ಮುಕ್ತವಾಗಿ ಭಾಗವಹಿಸಿ, ಜನವರಿ 10 ರೊಳಗಾಗಿ ವಿಡಿಯೋ ಚಿತ್ರೀಕರಿಸಿ ಸಲ್ಲಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 

ಉತ್ತಮ ಚಿತ್ರಕ್ಕೆ ಬಹುಮಾನ:  ಉತ್ತಮವಾದ ಕಿರುಚಿತ್ರಗಳಿಗೆ ಪ್ರಥಮ ಬಹುಮಾನ-5000/-, ದ್ವಿತೀಯ ಬಹುಮಾನ-3000/-ಹಾಗೂ ತೃತೀಯ ಬಹುಮಾನ2000/- ನೀಡಲಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಉಪಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ