Mysore
20
clear sky

Social Media

ಬುಧವಾರ, 14 ಜನವರಿ 2026
Light
Dark

ಈ ಬಾರಿ ಹುಟ್ಟುಹಬ್ಬದ ದಿನದಂದು ನಿಮ್ಮೊಂದಿಗೆ ಇರಲಾರೆ: ರಾಕಿಂಗ್‌ ಸ್ಟಾರ್‌!

ಬೆಂಗಳೂರು: ಕೆಜಿಎಫ್‌ ಖ್ಯಾತಿಯ ಕನ್ನಡದ ಸ್ಟಾರ್‌ ನಟ ರಾಕಿಂಗ್‌ ಸ್ಟಾರ್‌ ಯಶ್‌ ಈ ಬಾರಿಯೂ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಸಿನಿಮಾದಿಂದ ಬಿಡುವಿಲ್ಲದ ಕೆಲಸವಿದ್ದು, ಅಭಿಮಾನಿಗಳೊಂದಿಗೆ ಹುಟ್ಟುಹಬ್ಬದಂದು ಅಭಿಮಾನಿಗಳೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಕಿಂಗ್‌ ಸ್ಟಾರ್‌ ಯಶ್‌ ತಿಳಿಸಿದ್ದಾರೆ.

ಕೆಜಿಎಫ್‌ ಸರಣಿ ಚಿತ್ರಗಳ ಬಳಿಕ ಯಶಸ್ಸು ಕಂಡಿರುವ ನಟ ಯಶ್‌, ಬಂದ ಚಿತ್ರಗಳನ್ನು ಒಪ್ಪಿಕೊಳ್ಳದೇ, ಕಥೆ ಆಯ್ಕೆಯಲ್ಲಿ ಜಾಣ ನಡೆ ತೋರಿಸಿರುವ ಅವರು, ನೂತನ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ.

ಸದ್ಯ ಯಶ್‌ ತಮ್ಮ ಮುಂದಿನ ಚಿತ್ರವಾದ ಟಾಕ್ಸಿಕ್‌ ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣದಲ್ಲಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದು, ಜನವರಿ ೮ ರಂದು ತಮ್ಮ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳಿಗೆ ಸಿಗಲು ಆಗುತ್ತಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್‌ನಲ್ಲೇನಿದೆ?

ಜನವರಿ 8..

ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು, ನನ್ನ ಜೊತೆ ಖುದ್ದು ಇದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ.

ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ

ಆದರೆ, ಸಿನಿಮಾದ ಕೆಲಸ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಬೇಕಿರುವುದರಿಂದ ಈ ಜನವರಿ 8ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ..

ನಿಮ್ಮ ಅಭಿಮಾನ ನನ್ನ ಅನುಪಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು..

ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ..

ನಿಮ್ಮ ಪ್ರೀತಿಯ -ಯಶ್

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!