Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕ್ಷೇತ್ರ ಬಿಟ್ಟು ಅಮೇರಿಕಕ್ಕೆ ಹಾರಿದ ಶಾಸಕರ ವಿರುದ್ಧ ಮತದಾರರ ಆಕ್ರೋಶ!

ಮೇಲುಕೋಟೆ: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕ್ಷೇತ್ರದ ಜನರು ಹುಡುಕಿ ಹುಡುಕಿ ಸುಸ್ತಾಗಿದ್ದು, ಓಟು ಹಾಕಿದ ತಪ್ಪಿಗೆ ನಾವೇ ನಮ್ಮದನ್ನು ಹೊಡೆದುಕೊಳ್ಳಬೇಕು ಎನ್ನುವ ಆಕ್ರೋಶ ಭರಿತ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ.

ಈ ಬಾರಿಯ ವಿಧಾನಸಭೆಯಲ್ಲಿ ತಮ್ಮ ತಂದೆಯವರ ಸಾವಿನ ಸಿಂಪತಿಯನ್ನು ಗಿಟ್ಟಿಸಿಕೊಂಡು ಗೆಲುವು ಕಂಡಿರುವ ದರ್ಶನ್ ಪುಟ್ಟಣ್ಣಯ್ಯ ತಮ್ಮ ಶಾಸಕ ಸ್ಥಾನವನ್ನು ಸರಿಯಾಗಿ ನಿಭಾಸುತ್ತಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ಅವರಿಗೆ ಮೇಲುಕೋಟೆ ಕ್ಷೇತ್ರಕ್ಕಿಂತ ಅಮೇರಿಕಾದಲ್ಲಿರುವ ತಮ್ಮ ವ್ಯವಹಾರದ ಮೇಲೆಯೇ ಹೆಚ್ಚು ಪ್ರೀತಿ ಅಂಥ ಹೇಳುತ್ತಿದ್ದಾರೆ.

ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾದ ಏಳೇ ತಿಂಗಳಲ್ಲಿ ನಾಲ್ಕನೇ ಬಾರಿ ಅಮೇರಿಕಕ್ಕೆ ತೆರಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ವಿಧಾನಸಭೆ ಚುನಾವಣೆಗೂ ಮೊದಲು ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಾಟ ಮಾಡಿ ಹುಟ್ಟೂರಲ್ಲೇ ಇರುವುದಾಗಿ ದರ್ಶನ್ ಪುಟ್ಟಣಯ್ಯ ಭರವಸೆ ನೀಡಿದ್ದರು.

ಆದಾದ ಬಳಿಕ ಅವರು ಅಮೇರಿಕಾಕ್ಕೆ ಹೋಗಿದ್ದರು, ಬಳಿಕ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದರು. ಆದಾದ ಬಳಿಕ ಅವರು ತಮ್ಮ ಜನತೆ ಬಳಿ ಇನ್ಮುಂದೆ ಹೀಗೆ ಆಗುವುದಿಲ್ಲ ಅಂತ ಹೇಳಿದ್ದರು. ಆದರೆ ತಮ್ಮ ಮಾತನ್ನು ಮರೆತಿರುವ ಶಾಸಕರು ಈಗ ಮತ್ತೆ ಅಮೇರಿಕಾಕ್ಕೆ ಹೋಗಿರುವುದು ಜನತೆಯಲ್ಲಿ ಬೇಸರ ಮೂಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ