Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಕೋಳಿ ತೂಕದಲ್ಲಿ ಮೋಸ ಮಾಡಿದವನ ಮರಕ್ಕೆ ಕಟ್ಟಿಹಾಕಿದ ರೈತ!

ಮಂಡ್ಯ: ಕೋಳಿ ಫಾರಂನಲ್ಲಿ ಮಾಂಸದ ಕೋಳಿ ತುಂಬುವಾಗ ಮೋಸ ಮಾಡಲು ಯತ್ನಿಸಿದವರನ್ನು ರೈತನೋರ್ವ ಮರಕ್ಕೆ ಕಟ್ಟಿ ಹಾಕಿದ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬ್ಯಾಡರಹಳ್ಳಿ ಗ್ರಾಮದ ರೈತ ಹನುಮಂತೇಗೌಡಗೆ ಸೇರಿದ ಕೋಳಿಫಾರಂನಲ್ಲಿ ವಂಚನೆ ಪ್ರಕರಣ ನಡೆದಿದೆ.

ರೈತ ತಮ್ಮ ಕೋಳಿ ಫಾರಂನಲ್ಲಿ ಸಾಕು ಕೋಳಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ರು. ಕೋಳಿ ಖರೀದಿಸಲು ಬರುತ್ತಿದ್ದ ಮೈಸೂರು ಮೂಲದ NR ಚಿಕನ್ ಕಂಪನಿ ರೈತನಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಕೋಳಿ ತುಂಬುವಾಗ ತೂಕದಲ್ಲಿ ಮೋಸ ಮಾಡ್ತಿದ್ದರು.

ವಂಚನೆ ಬಗ್ಗೆ ಅನುಮಾನಗೊಂಡ ರೈತ ಹನುಮಂತೇಗೌಡ ಬೇರೆ ತೂಕದ ಯಂತ್ರ ತರಿಸಿ ತೂಕ ಹಾಕಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಒಂದು ತೂಕದಲ್ಲಿ ರೈತನಿಗೆ ಸರಿಸುಮಾರು 30ಕೆಜಿ ವ್ಯತ್ಯಾಸ ಕಂಡುಬಂದಿದೆ.

ಇದರಿಂದ ರೊಚ್ಚಿಗೆದ್ದ ರೈತ ಕೋಳಿ ತುಂಬಲು ಬಂದಿದ್ದ ನಾಲ್ವರಲ್ಲಿ ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿಹಾಕಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪಾಂಡವಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!