ಚಾಮರಾಜನಗರ: ಹೊಸ ವರ್ಷ ಪ್ರಯುಕ್ತ ನೂರಾರು ಪ್ರವಾಸಿಗರು ನೆರೆಯ ಪ್ರೇಕ್ಷಣೀಯ ಸ್ಥಳಗಳಿಗೆ ದೌಡಾಯಿಸುವುದು ಸಾಮಾನ್ಯವೇ. ಅದರಂತೆಯೇ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹಿಮವದ್ ಗೋಪಾಲಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.
ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ದೇವಾಲಯಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಟ್ಟು ಹಿಮವದ್ ಗೋಪಾಲಸ್ವಾಮಿ ದರ್ಶನ ಪಡೆದ ಬಳಿಕ ಸಫಾರಿ ಮಾಡಿ ಸಂಭ್ರಮಿಸಿರುವ ಪ್ರವಾಸಿಗರು.
ಹೊಸ ವರ್ಷ ಹಿನ್ನಲೆ ಪರಿಸರ ಪ್ರೇಮಿಗಳು ಬಂಡೀಪುರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ ಪರಿಣಾಮವಾಗಿ ಪ್ರವಾಸಿಗರಿಂದ ಬಂಡೀಪುರ ಫುಲ್ ರಶ್ ಆಗಿತ್ತು. ಆದ್ರೆ ವಾಹನಗಳಿಲ್ಲದೆ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಇನ್ನು ಕೇವಲ ಜಿಲ್ಲೆ ಹೊರ ಜಿಲ್ಲೆ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಿದ ಕಾರಣ ಬಂಡೀಪುರ ಸಫಾರಿ ಕೇಂದ್ರದ ಪಾರ್ಕಿಂಗ್ ಹೌಸ್ ಫುಲ್ ಆಗಿತ್ತು ಇದರಿಂದ ಸಫಾರಿ ಕೇಂದ್ರದ ಕಲೆಕ್ಷನ್ ಒಂದು ಪಟ್ಟು ಹೆಚ್ಚಾಗಿತ್ತು.
ಒಟ್ಟಾರೆ ಹೊಸ ವರ್ಷದ ಸಂಭ್ರಮದ ಹಿನ್ನಲೆ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳು ಪ್ರವಾಸಿಗರಿಂದ ಕಿಕ್ಕಿರಿದು ತುಂಬಿದ್ದು ಶಕ್ತಿ ಯೋಜನೆ ಜಾರಿ ಹಿನ್ನಲೆ ಈ ಭಾರಿ ಎಲ್ಲಾ ಪ್ರವಾಸಿ ತಾಣಗಳಲ್ಲಿಯೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದು ವಿಶೇಷ.