Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಾಲ್‌ ಆಫ್‌ ಏಷ್ಯಾ ನಿರ್ಬಂಧ ಪ್ರಶ್ನಿಸಿ ರಿಟ್‌ ಅರ್ಜಿ

ಬೆಂಗಳೂರಿನ ಹಲವು ಮಾಲ್‌ ಹಾಗೂ ಅಂಗಡಿಗಳಲ್ಲಿ ಕನ್ನಡ ಫಲಕಗಳಿಲ್ಲ, ಕನ್ನಡ ಫಲಕಗಳು ಕಡ್ಡಾಯವಾಗಬೇಕು ಎಂದು ಇತ್ತೀಚೆಗಷ್ಟೇ ಕನ್ನಡ ಪರ ಸಂಘಟನೆಗಳು ಕನ್ನಡ ಜಾಗೃತಿ ಅಭಿಯಾನದಡಿಯಲ್ಲಿ ವಿವಿಧ ಮಾಲ್‌ ಹಾಗೂ ಅಂಗಡಿಗಳಿಗೆ ನುಗ್ಗಿ ಕನ್ನಡವಿಲ್ಲದ ಬೋರ್ಡ್‌ಗಳನ್ನು ಒಡೆದು ಹಾಕಿದ್ದರು.

ಅದರಲ್ಲಿಯೂ ಮಾಲ್‌ ಆಫ್‌ ಏಷ್ಯಾದಲ್ಲಿ ಕನ್ನಡವೇ ಇಲ್ಲದ ಕಾರಣ ಈ ಮಾಲ್‌ ಕನ್ನಡ ಪರ ಹೋರಾಟಗಾರರ ಟಾರ್ಗೆಟ್‌ ಅಗಿತ್ತು. ಹೀಗಾಗಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಇಂದಿನಿಂದ ( ಡಿಸೆಂಬರ್‌ 31 ) ಜನವರಿ 15ರವರೆಗೆ ಈ ಮಾಲ್‌ ಬಂದ್‌ ಮಾಡಲು ಮಾಡಿ ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಆದೇಶ ಹೊರಡಿಸಿದ್ದರು. ಮಾಲ್‌ ಸುತ್ತಮುತ್ತ 144 ಜಾರಿ ಮಾಡಿ ನಿಷೇದಾಜ್ಞೆಯನ್ನು ಹೇರಲಾಗಿತ್ತು. ಇನ್ನು ಮಾಲ್‌ ಮುಂದೆ ʼಮಾಲ್‌ ಕ್ಲೋಸ್ಡ್‌ʼ ಎಂಬ ಫಲಕ ಇಟ್ಟು ಬಾಗಿಲು ಬಂದ್‌ ಮಾಡಲಾಗಿತ್ತು.

ಈ ಕುರಿತು ಇದೀಗ ಸ್ಪಾರ್ಕಲ್‌ ಒನ್‌ ಮಾಲ್‌ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ರಿಟ್‌ ಅರ್ಜಿ ಸಲ್ಲಿಸಿ ನಿರ್ಬಂಧವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ