Mysore
22
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಅಣ್ಣನನ್ನು ಟಾರ್ಗೆಟ್‌ ಮಾಡ್ತಿದ್ದಾರೆ, ಉತ್ತರ ಕೊಡ್ತೇನೆ: ವಿಕ್ರಂ ಸಿಂಹ ಆಕ್ರೋಶ

ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿರುವ ಆರೋಪದ ಮೇಲೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ಶನಿವಾರ ಬಂಧಿಸಿದ್ದರು.

ಸದ್ಯ ವಿಕ್ರಂ ಸಿಂಹ ಅವರ ವಿಚಾರಣೆ ನಡೆಯುತ್ತಿದ್ದು, ಇತ್ತ ಮೈಸೂರಿನಲ್ಲಿ ಪ್ರತಾಪ್‌ ಸಿಂಹ ಸಿದ್ದರಾಮಯ್ಯನವರಿಂದ ನನ್ನ ಹಾಗೂ ನನ್ನ ತಮ್ಮನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿ ಆಪಾದನೆ ಮಾಡಿದ್ದರು. ಇದಾದ ಬೆನ್ನಲ್ಲೇ ಇದೀಗ ವಿಕ್ರಂ ಸಿಂಹ ಸಹ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದು ಗೆಂಡೆಕಟ್ಟೆ ಅರಣ್ಯ ಪ್ರದೇಶದಿಂದ ಪೊಲೀಸರ ಜತೆ ತೆರಳುವಾಗ ಮಾತನಾಡಿದ್ದಾರೆ.

“ಈಗಲ್ಲ ಹೇಳ್ತೀನಿ. ಸಮಯ ಬರಲಿ ಎಲ್ಲವನ್ನೂ ಹೇಳ್ತೀನಿ. ನನ್ನ ವಿರುದ್ಧ ಎಷ್ಟು ಪಿತೂರಿ ಮಾಡ್ತಾ ಇದ್ದಾರೆ ಅನ್ನೋದನ್ನ ಬಹಿರಂಗವಾಗಿಯೇ ಹೇಳ್ತೀನಿ. ಯಾರ್ಯಾರ ಕೈವಾಡ ಇದೆ, ನಿಷ್ಠಾವಂತ ಅಧಿಕಾರಿ ಅಂತ ಯಾರನ್ನ ಹೇಳ್ತಾ ಇದ್ದೀರಿ. ಅವರ ಹಿಂದೆ ಯಾರಿದ್ದಾರೆ ಅನ್ನೋದನ್ನೂ ಹೇಳ್ತೀನಿ. ನನ್ನ ಹಾಗೂ ನನ್ನ ಅಣ್ಣನ್ನ ವ್ಯವಸ್ಥಿತವಾಗಿ ಮುಗಿಸೋದಕ್ಕೋಸ್ಕರ ಪ್ರಯತ್ನ ಮಾಡ್ತಾ ಇದ್ದಾರೆ. ನನ್ನ ಬ್ರದರ್‌ನ ಟಾರ್ಗೆಟ್‌ ಮಾಡ್ತಾ ಇದ್ದಾರೆ. ಇದಕ್ಕೆಲ್ಲಾ ಉತ್ತರ ಕೊಡ್ತೀನಿ” ಎಂದು ಹೇಳಿಕೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!