Mysore
15
broken clouds

Social Media

ಶನಿವಾರ, 04 ಜನವರಿ 2025
Light
Dark

ನನ್ನನ್ನು ಮುಗಿಸಲು ಸಿದ್ದರಾಮಯ್ಯ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ: ಪ್ರತಾಪ್‌ ಸಿಂಹ

ಮೈಸೂರು: ನನ್ನ ಮುಗಿಸೋದಕ್ಕೆ ಸಿದ್ಧರಾಮಯ್ಯ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಭಾವುಕರಾಗಿ ನುಡಿದಿದ್ದಾರೆ.

ಇಂದು ಮೈಸೂರಲ್ಲಿ ಸುದ್ದಿಗಾರರೊಂದಿಗೆ ಸಹೋದರ ವಿಕ್ರಂ ಸಿಂಹ ಬಂಧನ ಕುರಿತಂತೆ ಮಾತನಾಡಿದ ಅವರು, ನನ್ನ ಮುಗಿಸುವುದಕ್ಕೆ ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ.

ಸಿಎಂ ಸಿದ್ಧರಾಮಯ್ಯ ಸರ್ ಬ್ರಿಲಿಯಂಟ್ ಫಾದರ್, ಬ್ರಿಲಿಯಂಟ್ ಪೊಲಿಟೀಷಿಯನ್. ನಿಮ್ಮ ಮಗನನ್ನು ಎಂಪಿ ಮಾಡಲು ನನ್ಮೇಲೆ ಆರೋಪ ಮಾಡುತ್ತಿದ್ದೀರಿ ಅಂತ ನೇರಾನೇರವಾಗಿ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.

ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದೀರಿ. ಎಫ್‌ಐಆರ್ ನಲ್ಲಿ ಹೆಸರಿಲ್ಲದಿದ್ರೂ ನನ್ನ ತಮ್ಮನನ್ನು ಬಂಧಿಸಲಾಗಿದೆ. ನಮ್ಮ ಮನೆಯಲ್ಲಿ ವಯಸ್ಸಾಗಿರುವ ತಾಯಿ ಇದ್ದಾರೆ. ನನ್ನ ತಂಗಿ ಇದ್ದಾಳೆ. ಅವರಳನ್ನೂ ಅರೆಸ್ಟ್ ಮಾಡಿಬಿಡಿ ಅಂತ ಗುಡುಗಿದರು.

ನನ್ನ ತೇಜೋವಧೆ ಮಾಡಿದ್ರಿ, ಈಗ ಮುಗಿಸಲು ಯತ್ನ ಮಾಡುತ್ತಿದ್ದೀರಿ. ನನ್ನ ಕುಟುಂಬ ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಿ. ಒಂದು ನೆನಪಿಟ್ಟುಕೊಳ್ಳಿ ಇದ್ಯಾವುದಕ್ಕೂ ನಾನು ಬಗ್ಗಲ್ಲ ಅಂತ ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ