ಕಾಂಗ್ರೆಸ್ ನಿಗಮ ಮಂಡಳಿ ನೇಮಕ ಇನ್ನೂ ಘೋಷಣೆಯಾಗದೆಯೇ ಉಳಿದುಕೊಂಡಿದ್ದು, ಇದರ ಕುರಿತಾದ ಚರ್ಚೆಗಳು ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ರೆಬೆಲ್ ಶಾಸಕರಿಗೆ ನೂತನ ಹುದ್ದೆಗಳನ್ನು ನಿರ್ಮಿಸಿದ್ದಾರೆ.
ಸಚಿವ ಸ್ಥಾನ ಸಿಗದೇ ಬೇಸರಕ್ಕೊಳಗಾಗಿ ರೆಬೆಲ್ ಆಗಿದ್ದ ಮೂವರು ಹಿರಿಯ ಶಾಸಕರಾ ಆರ್‌ವಿ ದೇಶಪಾಂಡೆ, ಬಿಆರ್ ಪಾಟೀಲ್ ಹಾಗೂ ಬಸವರಾಜ್ ರಾಯರೆಡ್ಡಿಗೆ ಸಿದ್ದರಾಮಯ್ಯ ಹೊಸ ಹುದ್ದೆಗಳನ್ನು ನೀಡುವುದರ ಜತೆಗೆ ಸಂಪುಟ ದರ್ಜೆ ಸ್ಥಾನಮಾನವನ್ನೂ ಸಹ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಉಲಬರ್ಗಾ ಶಾಸಕ ಬಸವರಾಜ್ ರಾಯರೆಡ್ಡಿಗೆ ಮುಖ್ಯಮಂತ್ರಿಗೆ ಆರ್ಥಿಕ ಸಲಹೆಗಾರನನ್ನಾಗಿ ನೇಮಿಸಲಾಗಿದ್ದು, ಕಲಬುರಗಿ ಆಳಂದ ಕ್ಷೇತ್ರದ ಶಾಸಕ ಬಿಆರ್ ಪಾಟೀಲ್ ಸಲಹೆಗಾರನನ್ನಾಗಿ ನೇಮಿಸಲಾಗಿದೆ. ಇನ್ನು ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದ ಶಾಸಕ ಆರ್‌ವಿ ದೇಶಪಾಂಡೆಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಇದರ ಜತೆಗೆ ಈ ಮೂವರಿಗೂ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಲಭಿಸಿದೆ.





