Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಕನ್ನಡ ಬೋರ್ಡ್‌ ಕಡ್ಡಾಯ ಧರಣಿ: 15 ಕರವೇ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರಿನಲ್ಲಿನ ಮಾಲ್‌ ಹಾಗೂ ವಿವಿಧ ಶಾಪ್‌ಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಆಂಗ್ಲ ಭಾಷೆಯ ಬೋರ್ಡ್‌ಗಳು ಇರುವ ಕಾರಣ ಸಿಡಿದೆದ್ದಿದ್ದ ಕನ್ನಡ ಪರ ಸಂಘಟನೆಗಳು ಇಂದು ( ಡಿಸೆಂಬರ್‌ 27 ) ಕನ್ನಡ ಫಲಕಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಕನ್ನಡ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದವು.

ಈ ಅಭಿಯಾನದಡಿಯಲ್ಲಿ ಕರವೇ ಕಾರ್ಯಕರ್ತರು ಹಲವೆಡೆ ಆಂಗ್ಲ ಭಾಷೆಯಲ್ಲಿದ್ದ ಬೋರ್ಡ್‌ಗಳನ್ನು ಒಡೆದು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದರು. ಈ ವೇಳೆ ನಗರದ ಲಾವೆಲ್ಲೆ ರಸ್ತೆಯಲ್ಲಿ ಬೋರ್ಡ್‌ಗಳನ್ನು ಒಡೆದು ಹಾಕಿದ ಕಾರಣ 15 ಕರವೇ ಕಾರ್ಯಕರ್ತರ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 504, 506, 143, 147, 427, RW 41 ಹಾಗೂ PDLP Act 2a ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸದ್ಯ ಎಲ್ಲಾ 15 ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ಇತರೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದೇನೆ ಎಂದು ಸಂಜೆಯೇ ಹೇಳಿಕೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ