ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾದ ಮಂತ್ರಿ ಸ್ಕ್ವೇರ್ ಮಾಲ್‌ಗೆ ಬಿಬಿಎಂಪಿ ಬೀಗ ಜಡಿದಿದೆ. ಬರೋಬ್ಬರಿ 51 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ ಅವರಿಂದ ಬೀಗ ಹಾಕಲಾಗಿದೆ.
2019ರಿಂದ 2020ರವರೆಗಿನ ತೆರಿಗೆ ಬಾಕಿಯಿರುವ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಈ ಹಿಂದೆಯೂ ಸಹ ಇದೇ ಮಾಲ್‌ಗೆ ತೆರಿಗೆ ಹಣ ಪಾವತಿಸದ ಕಾರಣಕ್ಕಾಗಿ ಹಲವು ಬಾರಿ ಬೀಗ ಹಾಕಿದ ಉದಾಹರಣೆಗಳಿವೆ.
ಇನ್ನು 2020ರ ಆಗಸ್ಟ್‌ನಲ್ಲಿ ಬಿಬಿಎಂಪಿಗೆ ಮಂತ್ರಿ ಸ್ಕ್ವೇರ್ ನೀಡಿದ್ದ 10 ಕೋಟಿ ಮೊತ್ತದ ಚೆಕ್ ಬೌನ್ಸ್ ಆಗಿತ್ತು ಹಾಗೂ ಬಿಬಿಎಂಪಿ ಪದೇಪದೆ ನೋಟಿಸ್ ನೀಡಿತ್ತು. ಆದರೂ ಸಹ ಮಾಲ್‌ನ ಆಡಳಿತ ಮಂಡಳಿ ತೆರಿಗೆ ಪಾವತಿಸು ಕ್ರಮ ಕೈಗೊಂಡಿರಲಿಲ್ಲ.
ಈ ಹಿಂದೆ 42 ಕೋಟಿ ಮೊತ್ತದ ತೆರಿಗೆಯನ್ನು ಮಂತ್ರಿ ಸ್ಕ್ವೇರ್ ಬಾಕಿ ಉಳಿಸಿಕೊಂಡಿತ್ತು. ಆ ವೇಳೆ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ವಶಪಡಿಸಿಕೊಂಡಿತ್ತು.