Mysore
18
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಬೆಂಗಳೂರಲ್ಲಿ ಜೋರಾಯಿತು ಕನ್ನಡ ಜಾಗೃತಿ ಅಭಿಯಾನ; ಶಿವರಾಜ್‌ ತಂಗಡಗಿ ಪ್ರತಿಕ್ರಿಯೆ

ಬೆಂಗಳೂರು ನಗರದಲ್ಲಿ ಕನ್ನಡಕ್ಕಿಂತ ಇಂಗ್ಲಿಷ್‌ ಭಾಷೆಯಲ್ಲಿಯೇ ಹೆಚ್ಚು ಬೋರ್ಡ್‌ಗಳಿವೆ ಎಂಬ ಆರೋಪ ಮಾಡಿರುವ ಕನ್ನಡ ಪರ ಸಂಘಟನೆಗಳು ಇಂದು ಬೃಹತ್‌ ಧರಣಿ ಹಮ್ಮಿಕೊಂಡಿದ್ದವು. ಕನ್ನಡ ಜಾಗೃತಿ ಮೂಡಿಸುವ ಈ ಅಭಿಯಾನದಡಿಯಲ್ಲಿ ಕನ್ನಡಪರ ಹೋರಾಟಗಾರರು ಆಂಗ್ಲ ಭಾಷೆಯಲ್ಲಿದ್ದ ವಿವಿಧ ಮಾಲ್‌, ದೊಡ್ಡ ಮತ್ತು ಸಣ್ಣ ಅಂಗಡಿಗಳ ಬೋರ್ಡ್‌ಗಳನ್ನು ಪುಡಿಗಟ್ಟಿ ಆಕ್ರೋಶಯುತವಾಗಿ ಹೋರಾಟವನ್ನು ಮಾಡಿದರು.

ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಮಾಲ್‌ ಆಫ್‌ ಏಷ್ಯಾ ಸೇರಿದಂತೆ ವಿವಿಧೆಡೆ ದೊಡ್ಡ ಮಟ್ಟದಲ್ಲಿ ಜಮಾಯಿಸಿ ಇಂಗ್ಲಿಷ್‌ ಬೋರ್ಡ್‌ ಹಾಗೂ ಜಾಹೀರಾತು ಬೋರ್ಡ್‌ಗಳನ್ನು ಹರಿದು ಹಾಕಿದರು. ಇನ್ನು ಮಾಲ್‌ ಆಫ್‌ ಏಷ್ಯಾ ಮುಂದೆ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು. ಮಹಿಳಾ ಹೋರಾಟಗಾರ್ತಿಯರು ಮಾಲ್‌ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆಯಲು ಹರಸಾಹಸಪಟ್ಟರು. ಕೆಲಕಾಲ ಉಂಟಾದ ತಳ್ಳಾಟದ ಬಳಿಕ ಹೋರಾಟಗಾರರನ್ನು ವಶಕ್ಕೆ ಪಡೆದರು.

ಇನ್ನು ಈ ರೀತಿಯ ಹೋರಾಟಗಳು ನಡೆಯುತ್ತಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಿಂದುಗಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಹೋರಾಟಗಾರರು ಶಾಂತಿಯುತ ಹೋರಾಟವನ್ನು ಮಾತ್ರ ಮಾಡಬೇಕು, ಕನ್ನಡ ಫಲಕಗಳನ್ನು ಹೆಚ್ಚು ಬಳಕೆ ಮಾಡಬೇಕು ಎಂಬ ಬಿಲ್‌ ಅನ್ನು ಈಗಾಗಲೇ ಅಧಿವೇಶನದಲ್ಲಿ ಪಾಸ್ ಮಾಡಲಾಗಿದೆ, ನಮ್ಮ ಇಲಾಖೆ ಸಹ ಕನ್ನಡಪರ ಸಂಘಟನೆಗಳ ಹಾಗೆ ಕೆಲಸ ಮಾಡಲಿದೆ ಎಂದು ಹೇಳಿಕೆಯನ್ನು ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!