Mysore
26
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಅಗ್ನಿಪಥ್ ನೇಮಕಾತಿಯಿಂದ ಯುವಕರ ಕನಸು ನಾಶ: ರಾಹುಲ್‌ ಗಾಂಧಿ

ನವದೆಹಲಿ: ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪರಿಚಯಿಸುವ ಮೂಲಕ ಸರ್ಕಾರ ಅಸಂಖ್ಯಾತ ಯುವಕರ ಕನಸುಗಳನ್ನು ನಾಶಪಡಿಸಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಇದೇ ವೇಳೇ ಅವರು ನಿರುದ್ಯೋಗ ಸಮಸ್ಯೆಯನ್ನು “ಬೀದಿಗಳಿಂದ ಸಂಸತ್ತಿನವರೆಗೆ” ಸಮಸ್ಯೆ ಬಗ್ಗೆ ಧ್ವನಿ ಎತ್ತುವವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

“ಅಗ್ನಿವೀರ್ ಯೋಜನೆಯ ಸೋಗಿನಲ್ಲಿ ಸೇನೆ ಮತ್ತು ಭಾರತೀಯ ವಾಯುಪಡೆಯ ಶಾಶ್ವತ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ ಮೂಲಕ ಸರ್ಕಾರ ಅಸಂಖ್ಯಾತ ಯುವಕರ ಕನಸುಗಳನ್ನು ನಾಶಪಡಿಸಿದೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸತ್ಯಾಗ್ರಹದ ಭೂಮಿ ಚಂಪಾರಣ್ಯದಿಂದ ದೆಹಲಿಗೆ ತಲುಪಲು ಸುಮಾರು 1,100 ಕಿಲೋಮೀಟರ್ ನಡೆದುಕೊಂಡು ಹೋದ ಯುವಕರ ಹೋರಾಟವನ್ನು ಮಾಧ್ಯಮಗಳು ತೋರಿಸದಿರುವುದು ಬೇಸರದ ಸಂಗತಿ” ಎಂದು ಅವರು ಹೇಳಿದರು.

“ಉದ್ಯೋಗದ ವಿಷಯವನ್ನು ಬೀದಿಗಳಿಂದ ಸಂಸತ್ತಿನವರೆಗೆ ಎತ್ತುವ ಯುವಕರೊಂದಿಗೆ ನಾವು ಇದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!