Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

IND vs SA 3rd ODI: ಏಕದಿನ ಸರಣಿ ವಶಪಡಿಸಿಕೊಂಡ ಟೀಮ್‌ ಇಂಡಿಯಾ

ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಟೀಮ್‌ ಇಂಡಿಯಾ ಮೂರನೇ ಏಕದಿನ ಪಂದ್ಯದಲ್ಲಿ 78 ರನ್‌ಗಳ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್‌ ಆಯ್ದುಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತ್ತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಟೀಮ್‌ ಇಂಡಿಯಾ ಸಂಜು ಸ್ಯಾಮ್ಸನ್‌ ಶತಕ ಹಾಗೂ ತಿಲಕ್‌ ವರ್ಮಾ ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್‌ ಕಲೆಹಾಕಿ ದಕ್ಷಿಣ ಆಫ್ರಿಕಾಗೆ ಗೆಲ್ಲಲು 297 ರನ್‌ಗಳ ಗುರಿಯನ್ನು ನೀಡಿತ್ತು.

ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿರುವ ದಕ್ಷಿಣ ಆಫ್ರಿಕಾ 45.5 ಓವರ್‌ಗಳಲ್ಲಿ 218 ರನ್‌ಗಳಿಗೆ ಆಲ್‌ಔಟ್‌ ಆಗಿದ್ದು 78 ರನ್‌ಗಳ ಅಂತರದಿಂದ ಸೋಲನ್ನು ಕಂಡಿದೆ.

ಭಾರತ ಇನ್ನಿಂಗ್ಸ್:‌ ಭಾರತದ ಪರ ಆರಂಭಿಕರಾಗಿ ರಜತ್‌ ಪಟಿದಾರ್‌ 22 ರನ್‌ ಗಳಿಸಿದರೆ, ಸಾಯಿ ಸುದರ್ಶನ್‌ 10 ರನ್‌ ಕಲೆಹಾಕಿದರು. ಸಂಜು ಸ್ಯಾಮ್ಸನ್‌ 114 ಎಸೆತಗಳಲ್ಲಿ 108 ರನ್‌ ಬಾರಿಸಿ ತಮ್ಮ ಅಂತಾರಾಷ್ಟ್ರಿಯ ಕ್ರಿಕೆಟ್‌ ಕೆರಿಯರ್‌ನ ಚೊಚ್ಚಲ ಸೆಂಚುರಿ ಸಿಡಿಸಿ ಉತ್ತಮ ಪ್ರದರ್ಶನ ನೀಡಿದರು. ನಾಯಕ ಕೆಎಲ್‌ ರಾಹುಲ್‌ 21 ರನ್‌, ತಿಲಕ್‌ ವರ್ಮಾ 52 ರನ್‌, ಅಕ್ಷರ್‌ ಪಟೇಲ್‌ 1 ರನ್‌, ವಾಷಿಂಗ್ಟನ್‌ ಸುಂದರ್‌ 14, ರಿಂಕು ಸಿಂಗ್‌ 38, ಅರ್ಷ್‌ದೀಪ್‌ ಸಿಂಗ್‌ ಅಜೇಯ 7 ಹಾಗೂ ಅವೇಶ್‌ ಖಾನ್‌ ಅಜೇಯ 1 ರನ್‌ ಕಲೆಹಾಕಿದರು.

ದಕ್ಷಿಣ ಆಫ್ರಿಕಾ ಪರ ಬ್ಯೂರನ್‌ ಹೆಂಡ್ರಿಕ್ಸ್‌ 3 ವಿಕೆಟ್‌ ಪಡೆದರೆ, ನಾಂಡ್ರೆ ಬರ್ಗರ್‌ 2 ವಿಕೆಟ್‌ ಹಾಗೂ ಲಿಜಾರ್ಡ್‌ ವಿಲಿಯಮ್ಸ್‌, ವಿಯಾನ್‌ ಮಲ್ಡರ್‌ ಮತ್ತು ಕೇಶವ್‌ ಮಹಾರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:‌ ಭಾರತ ನೀಡಿದ ಗುರಿಯನ್ನು ನೀಡಿದ ಬೆನ್ನಟ್ಟಲು ಯತ್ನಿಸಿದ ದಕ್ಷಿಣ ಆಫ್ರಿಕಾ ಒಳ್ಳೆಯ ಆರಂಭವನ್ನೇ ಪಡೆದುಕೊಂಡಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಟೋನಿ ಡಿ ಝೋರ್ಝಿ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಜವಾಬ್ದಾರಿಯುತ ಆಟವನ್ನಾಡಿರೂ ತಂಡದ ಇತರೆ ಆಟಗಾರರಿಂದ ದೊಡ್ಡ ಇನ್ನಿಂಗ್ಸ್‌ ಬಾರಲಿಲ್ಲ. ಟೋನಿ ಡಿ ಝೋರ್ಝಿ 81, ರೀಜಾ ಹೆಂಡ್ರಿಕ್ಸ್‌ 19, ರಸ್ಸಿ ವಂಡರ್‌ ಡಸನ್‌ 2, ಏಡನ್‌ ಮಾರ್ಕ್ರಮ್‌ 36, ಹೆನ್‌ರಿಚ್‌ ಕ್ಲಾಸೀನ್‌ 21, ಡೇವಿಡ್‌ ಮಿಲ್ಲರ್‌ 10, ವಿಯಾನ್‌ ಮಲ್ಡರ್‌ 1, ಕೇಶವ್‌ ಮಹಾರಾಜ್‌ 14, ಬ್ಯೂರನ್‌ ಹೆಂಡ್ರಿಕ್ಸ್‌ 18, ಲಿಜಾರ್ಡ್‌ ವಿಲಿಯಮ್ಸ್‌ 2 ಹಾಗೂ ನಾಂದ್ರೆ ಬರ್ಗರ್‌ ಅಜೇಯ ಒಂದು ರನ್‌ ಕಲೆಹಾಕಿದರು.

ಭಾರತದ ಪರ ಅರ್ಷ್‌ದೀಪ್‌ ಸಿಂಗ್‌ ನಾಲ್ಕು ವಿಕೆಟ್‌ ಪಡೆದು ಮಿಂಚಿದರೆ, ಅವೇಶ್‌ ಖಾನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ಎರಡೆರಡು ವಿಕೆಟ್‌ ಮತ್ತು ಮುಖೇಶ್‌ ಕುಮಾರ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ