Mysore
27
clear sky

Social Media

ಶನಿವಾರ, 31 ಜನವರಿ 2026
Light
Dark

ಬ್ರಿಜ್‌ ಭೂಷಣ್‌ ಆಪ್ತ WFI ಅಧ್ಯಕ್ಷನಾದ ಬೆನ್ನಲ್ಲೇ ಕಣ್ಣೀರಿಟ್ಟು ವಿದಾಯ ಹೇಳಿದ ಸಾಕ್ಷಿ ಮಲಿಕ್‌

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಆಪ್ತ ಸಂಜಯ್‌ ಸಿಂಗ್‌ ನೂತನ ಅಧ್ಯಕ್ಷನಾಗಿ ಆಯ್ಕೆಯಾದ ಬೆನ್ನಲ್ಲೇ ಮನನೊಂದ ಪದಕ ವಿಜೇತೆ, ಕುಸ್ತಿಪಟು ಸಾಕ್ಷಿ ಮಲಿಕ್‌ ಕುಸ್ತಿಯಿಂದ ದೂರ ಉಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಈ ಹಿಂದೆ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ರೆಸ್ಲರ್‌ಗಳ ಗುಂಪಿನೊಂದಿಗೆ ಪ್ರತಿಭಟನೆ ನಡೆಸಿದ್ದ ಸಾಕ್ಷಿ ಮಲಿಕ್‌ ಇದೀಗ ಅದೇ ಬ್ರಿಜ್‌ ಭೂಷನ್‌ ಸಿಂಗ್‌ನ ಆಪ್ತ ಸಂಜಯ್‌ ಸಿಂಗ್ ‍ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ‌ಸಾಕ್ಷಿ ಮಲಿಕ್‌ ನಿವೃತ್ತಿಗೆ ಕಾರಣವಾಗಿದೆ. ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ನಿಷ್ಠಾವಂತರ ಅಡಿಯಲ್ಲಿ ಸ್ಪರ್ಧಿಸಲು ನಾನು ಇಚ್ಛಿಸುವುದಿಲ್ಲ ಎಂದು ಹೇಳಿಕೆ ನೀಡಿರುವ ಒಲಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಶೂ ಕಳಚಿ ಕಣ್ಣೀರು ಹಾಕುತ್ತಾ ವಿದಾಯ ಘೋಷಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!