Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಟಿಪ್ಪುವನ್ನು ದೇಶ ದ್ರೋಹಿಯಂತೆ ಬಿಂಬಿಸುವುದು ಬೇಡ: ಎಚ್‌.ಸಿ ಮಹದೇವಪ್ಪ

ಮೈಸೂರು : ಮೈಸೂರು ವಿಮಾನ ನಿಲ್ದಾಣಕ್ಕೆ ರಾಜಾ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿನ ಬದಲಿಗೆ ಟಿಪ್ಪು ಹೆಸರಿಡುವಂತೆ ಸದನದಲ್ಲಿ ಕೆಲವು ಕಾಂಗ್ರೆಸ್‌ ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದ್ಯ ಟಿಪ್ಪು ವಿಚಾರ ಮುನ್ನಲೆಗೆ ಬಂದಿದೆ. ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ ಅವರು ಮಾತನಾಡಿದ್ದು, ಟಿಪ್ಪುವನ್ನು ದೇಶ ದ್ರೋಹಿಯಂತೆ ಬಿಂಬಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದು ಬಿಡುವುದು ಬೇರೆ ವಿಚಾರ. ಟಿಪ್ಪು ನಮ್ಮ ನಮ್ಮವರಲ್ಲವೇ, ಅವರೇನು ಬೇರೆ ದೇಶದವರಾ ಅವರನ್ನು ದೇಶ ದ್ರೋಹಿಯಂತೆ ಬಿಂಬಿಸಲಾಗುತ್ತಿರುವುದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ.

ಟಿಪ್ಪು ತನ್ನ ಆಡಳೀತಾವಧಿಯಲ್ಲಿ ಭೂ ಸುಧಾರಣೆ ಕಾಯ್ದೆ, ಸತಿ ಸಹಾಗಮನ ಪದ್ದತಿ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಪ್ರಮುಖವಾಗಿ ಕೆಆರ್‌ಎಸ್‌ ಗೆ ಮೊದಲು ಅಡಿಪಾಯ ಹಾಕಿದ್ದು ಟಿಪ್ಪು ಸುಲ್ತಾನ್‌ ಅವರೇ ಅಲ್ಲವೇ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರಿಡಲು ಸರ್ಕಾರದಿಂದ ತಕರಾರೇನಿಲ್ಲ, ಹಲವರು ಟಟಿಪ್ಪು ಹೆಸರಿಡಲು ಸೂಚಿಸಿದ್ದಾರೆ ಎಂದರು.

ಇನ್ನು ಲೋಕಸಭಾ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ, ಇದೊಂದು ರಾಷ್ಟ್ರೀಯ ಭದ್ರತಾ ವಿಚಾರವಾಗಿದೆ. ಇದೇ ವಿಚಾರ ಬೇರೆ ಧರ್ಮದವರಿಂದ ಪಾಸ್‌ ನೀಡಿದ್ದರೇ ಏನಾಗುತ್ತಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ