ರಾಜ್‌ಕೋಟ್ : ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ರಾಜಸ್ಥಾನ ತಂಡವನ್ನು ಮಣಿಸಿದ ಹರಿಯಾಣ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇಂದು (ಡಿಸೆಂಬರ್ 16) ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 30 ರನ್‌ಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ ತನ್ನ ಮೊಲದ ಪ್ರಶಸ್ತಿ ಗೆದ್ದುಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು. ತಂಡಡದ ಪರ ಅಂಕಿತ್ ಕುಮಾರ್ (88) ನಾಯಕ ಮನಾರಿಯ (70) ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಉಳಿದಂತೆ ರೋಹಿತ್ ಪ್ರಮೋದ್ ಶರ್ಮಾ (20) ನಿಶಾಂತ್ ಸಿಂಧು (29) ಸುಮಿತ್ ಕುಮಾರ್ (28) ರನ್ ಕಲೆಹಾಕಿದರು.
ರಾಜಸ್ಥಾನ ಪರ ಅನಿಕೇತ್ ಚೌಧರಿ 49/4 ಅರ್ಫಾತ್ ಖಾನ್ 59/2 ವಿಕೆಟ್ ಪಡೆದರು.
287 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನಕ್ಕೆ ಆರಂಭಿಕ ಆಘಾತ ಎದುರಾಯಿತು. ರಾಂ ಮೋಹನ್ ಚೌಹಾಣ್ (1) ಲಾಮ್ರೋರ್ (2) ಮತ್ತು ನಾಯಕ ಶೂನ್ಯಕ್ಕೆ ಔಟಾದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಭದ್ರವಾಗಿ ನಿಂತು ಬ್ಯಾಟಿಂಗ್ ಮಾಡಿದ ಅಭಿಜಿತ್ ತೋಮರ್ 129 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್ ಮೂಲಕ 106 ರನ್ ಬಾರಿಸಿದರು ಹಾಗೂ ಕುನಾಲ್ ಸಿಂಗ್ ರಾಥೋಡ್ 79 ರನ್ ಗಳಿಸಿದ ಹೋರಾಟದ ಇನ್ನಿಂಗ್ಸ್ ಹೊರತಾಗಿಯೂ ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಕೈಚೆಲ್ಲಿ 48 ಓವರ್ಗಳ ಅಂತ್ಯಕ್ಕೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 257 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ರಾಜಸ್ಥಾನ ತಂಡ ಹರಿಯಾಣ ವಿರುದ್ಧ 30 ರನ್‌ಗಳ ಸೋಲು ಅನುಭವಿಸಿ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿಹಿಡಿಯುವ ಅವಕಾಶದಿಂದ ವಂಚಿತವಾಯಿತು.
ಪಂದ್ಯ ಶ್ರೇಷ್ಠ: ಸುಮಿತ್ ಕುಮಾರ್
ಸರಣಿ ಶ್ರೇಷ್ಠ: ಸುಮಿತ್ ಕುಮಾರ್