Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಕೇಸ್​: ಡಾ ಶ್ರೀನಿವಾಸ್ ಬಂಧನ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿರುಮಲಶೆಟ್ಟಿಹಳ್ಳಿಯ ಎಸ್​ಪಿಜಿ ಆಸ್ಪತ್ರೆಯಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಪಿಜಿ ಆಸ್ಪತ್ರೆ ಮಾಲೀಕ, ವೈದ್ಯ ಡಾ.ಶ್ರೀನಿವಾಸ್​ರ​ನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚೆನ್ನಸಂದ್ರ ಗ್ರಾಮದಲ್ಲಿ ಅಡಗಿದ್ದ ಡಾ.ಶ್ರೀನಿವಾಸ್‌ ಅಡಗಿದ್ದು, ಆತನನನ್ನು ಪೊಲೀಸರು ಬಂಧಿಸಿದ್ದಾರೆ.

ಇವರನ್ನು​ ಸೇರಿದಂತೆ ಐವರ ವಿರುದ್ಧ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಶ್ರೀನಿವಾಸ್ ಮೊದಲ ಆರೋಪಿಯಾಗಿದ್ದು (ಎ1), ಎ2 ನರ್ಸ್​ ಅನಿತಾ, ಎ3 ನರ್ಸ್​​ ನೇತ್ರಾ, ಎ4 ರೇವತಿ, ಎ5 ರಾಧಿಕಾ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಮೈಸೂರು, ಮಂಡ್ಯದಲ್ಲಷ್ಟೇ ಅಲ್ಲದೇ ಬೆಂಗಳೂರಿನ ಮಡಿಲಲ್ಲೇ ಭ್ರೂಣ ಹತ್ಯೆ ಕೃತ್ಯ ನಡೆದಿತ್ತು. ಇದು ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

ಒಂದಲ್ಲ, ಎರಡಲ್ಲ, 14 ಹೆಣ್ಣು ಭ್ರೂಣಗಳ ಹತ್ಯೆ ಮಾಡಿರುವುದು ಬಯಲಾಗಿದೆ. ಹೊಸಕೋಟೆಯ ತಿರುಮಲಶೆಟ್ಟಿಹಳ್ಳಿ ಬಳಿಯ ಎಸ್​​​ಪಿಜಿ ಆಸ್ಪತ್ರೆಯಲ್ಲಿ ಅಬಾರ್ಷನ್ ವೇಳೆ ರೆಡ್ ಹ್ಯಾಂಡ್ ಆಗಿ ವೈದ್ಯರು ಸಿಕ್ಕಿಬಿದ್ದಿದ್ದರು. ಎಸ್​ಪಿಜಿ ಆಸ್ಪತ್ರೆಯಲ್ಲೇ ನಡೆದಿದ್ದ ರಕ್ತಸಿಕ್ತ ದಂಧೆ ಬೆಚ್ಚಿ ಬೀಳುವಂತಿತ್ತು.

ಖಾಸಗಿ ಕ್ಲಿನಿಕ್​ನಲ್ಲಿ ಅಕ್ರಮ ಸ್ಕ್ಯಾನಿಂಗ್ ಮಿಷ‌ನ್ ಪತ್ತೆ ಆಗಿದ್ದವು. ಕೆಪಿಎಂಇ ಆಕ್ಟ್ ಪಾಲನೆ ಬಗ್ಗೆ ಪರಿಶೀಲನೆಗೆ ಬಂದಿದ್ದ ವೇಳೆ ಮಿಷನ್ ಪತ್ತೆಯಾಗಿದ್ದವು. ಸ್ಕ್ಯಾನಿಂಗ್ ಮಿಷನ್ ಹಿನ್ನೆಲೆ ಹುಡುಕಿ ಹೊರಟಾಗ ಭ್ರೂಣ ಹತ್ಯೆ ಬಯಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ