Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಾರಾಂತ್ಯ ವಿಶೇಷ: ಪ್ರಳಯ ಸೂಚಕ ಏಕಶಿಲಾ ಗಣಪ

ಮಂಡ್ಯದ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಐತಿಹಾಸಿಕ ಮತ್ತು ವೆಂಕಟರಮಣ ಸ್ವಾಮಿ ದೇವಸ್ಥಾನವಿದೆ. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇಲ್ಲಿ ಕಾಣಸಿಗಲಿದ್ದು, ಧಾರ್ಮಿಕ ಕ್ಷೇತ್ರವಾದ ಯೋಗಾನರಸಿಂಹ ಸ್ವಾಮಿ ಬೆಟ್ಟದ ಬುಡದಲ್ಲಿರುವ ಏಕಶಿಲಾ ಗಣಪನ ಬೃಹತ್ ವಿಗ್ರಹ ಜನಾಕರ್ಷಣೆಯ ಕೇಂದ್ರವಾಗಿದೆ.

ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎನ್ನಲಾದ ಈ ಏಕಶಿಲಾ ಗಣಪನ ವಿಗ್ರಹವನ್ನು ಬಂಡೆ ಗಣಪ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದ್ದು, ಪ್ರಳಯ ಗಣಪ ಎಂಬ ವಿಶಿಷ್ಟ ಹೆಸರೂ ಇದೆ. 16 ಅಡಿ
ಎತ್ತರವಿರುವ ಈ ವಿಗ್ರಹ ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿನವರೆಗೆ ತಿರುಗುತ್ತಿದ್ದು, ಅದು ಪೂರ್ತಿಯಾಗಿ ತಿರುಗಿದರೆ ಪ್ರಳಯವಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಆದ್ದರಿಂದಲೇ ಇದನ್ನು ಪ್ರಳಯ ಸೂಚಕ ಗಣಪ ಎಂದೂ ಕರೆಯುತ್ತಾರೆ.

ಮೇಲುಕೋಟೆ ಬೆಟ್ಟದ ಮೇಲಿನ ಯೋಗಾನರಸಿಂಹಸ್ವಾಮಿ ದೇವಾಲಯದ ರಾಜಗೋಪುರ ಮತ್ತು ಮೆಟ್ಟಿಲುಗಳ ನಿರ್ಮಾಣದ ವೇಳೆ ಅನಾಹುತಗಳು ಸಂಭವಿಸುತ್ತಿದ್ದಾಗ ಜ್ಯೋತಿಷಿಯೊಬ್ಬರ ಮಾರ್ಗದರ್ಶನದಂತೆ ಇಲ್ಲಿ ಗಣಪನ ವಿಗ್ರಹ ನಿರ್ಮಿಸಲಾಯಿತು ಎನ್ನಲಾಗಿದೆ.

ಮೈಸೂರು ಮತ್ತು ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಮೇಲುಕೋಟೆಯಲ್ಲಿ ಬೆಟ್ಟದ ಮೇಲಿನ ಯೋಗಾ ನರಸಿಂಹಸ್ವಾಮಿ ದೇವಾಲಯ ನಿರ್ಮಾಣದಲ್ಲಿ, ನಾನಾ ಅನಾಹುತಗಳು ನಡೆದು, ಜತೆಗೆ ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳ ನಿರ್ಮಾಣದ ಕಾರ್ಯವೂ ಸರಿಯಾಗಿ ನಡೆಯದೆ ಹಲವು ವಿಘ್ನಗಳಾಗಿದ್ದವಂತೆ. ಆದ್ದರಿಂದ ಬೆಟ್ಟದ ಬುಡದಲ್ಲಿ ಗಣಪನನ್ನು ಪ್ರತಿಷ್ಠಾಪಿಸಿದರೆ ವಿಘ್ನಗಳು ನಿವಾರಣೆಯಾಗಬಹುದು ಎಂದು ಬೆಟ್ಟದ ಬುಡದಲ್ಲಿ ಏಕಶಿಲಾ ಗಣಪನ ವಿಗ್ರಹ ನಿರ್ಮಾಣ ಮಾಡಲಾಗಿದೆ. ಈ ರೀತಿ ಏಕಶಿಲಾ ಗಣಪನ ವಿಗ್ರಹ ಕರ್ನಾಟಕದ ಯಾವುದೇ ದೇವಾಲಯಗಳಲ್ಲೂ ಕಂಡು ಬರುವುದಿಲ್ಲ ಎಂಬುದು ಮತ್ತೊಂದು ವಿಶೇಷ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ