Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ವೀರಶೈವ ಮಹಾಧಿವೇಶನ: ಸಿಎಂಗೆ ಮನವಿ ಪತ್ರ ನೀಡಿದ ಈಶ್ವರ್‌ ಖಂಡ್ರೆ

ಬೆಳಗಾವಿ : ದಾವಣಗೆರೆಯಲ್ಲಿ ಡಿಸೆಂಬರ್‌ 23, 24 ರಂದು ವೀರಶೈವ ಮಹಾ‌ ಅಧಿವೇಶನ ಹಿನ್ನೆಲೆ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನೆನ್ನೆ (ಗುರುವಾರ) ಪೂರ್ವಭಾವಿ ಸಭೆ ನಡೆಯಿತು. ಈ ಸಭೆಗೆ ಸಮಾಜದ ಎಲ್ಲಾ ಮುಖಂಡರು ಭಾಗಿಯಾಗುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನೆನ್ನೆ ಮತ್ತು ಇಂದು ಸಭೆ ನಡೆದಿದೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂ.ಬಿ ಪಾಟೀಲ್‌ ಅವರು ನಮ್ಮೊಂದಿಗೆ ಇದ್ದರು, ಎಲ್ಲರಲ್ಲಿಯೂ ಒಮ್ಮತದ ನಿರ್ಧಾರವಿದೆ. ನಾವೆಲ್ಲಾ ಒಂದಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಮನವಿ ಪತ್ರದಲ್ಲೇನಿದೆ?

ಜಾತಿ ಗಣತಿ ವಿರೋಧಿಸಿ ಸದನದಲ್ಲಿನ ಎಲ್ಲಾ ಸಮುದಾಯದ ನಾಯಕರ ಸಹಿಯೊಂದಿಗೆ ವೀರಶೈವ ಮಹಾಸಭಾ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಸಮ್ಮುಖದಲ್ಲಿ ಸಿಎಂ ಅವರನ್ನು ಭೇಟಿಯಾಗಿ ಕಾಂತರಾಜು ಜಾತಿಗಣತಿ ವರದಿ ತಿರಸ್ಕರಿಸಿ, ಬದಲಾಗಿ ನೂತನ ವೈಜ್ಞಾನಿಕ ಜಾತಿ ಗಣತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಈಗಿನ ಜಾತಿ ಗಣತಿಯಲ್ಲಿಯೇ ಹಲವಾರು ಲೋಪದೋಷಗಳು ಕಂಡುಬಂದಿವೆ. ಲಿಂಗಾಯತ ಸುಮುದಾಯದಲ್ಲಿ ಅನೇಕ ಮನೆಗಳ ಸರ್ವೆ ಆಗಿಲ್ಲ, ಆರಂಭಿಕ ಲೋಪದೋಷ ಇರುವ ವರದಿ ಸಲ್ಲಿಸಿದರೆ ಅದು ವೈಜ್ಞಾನಿಕವಾಗಿರಲಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅದರ ಜೊತೆಜೊತೆಗೆ ಮೂಲ ದಾಖಲಾತಿಗಳು ಕಾಣೆಯಾಗಿದೆ ಎಂದು ಕಂಡುಬರುತ್ತಿದೆ, ಸಹಿಯಾಗದ ದಾಖಲೆ, ಕೇವಲ ಡಾಟಾ ಮೂಲಕ ಜಾತಿ ಗಣತಿ ಮಾಡುವುದು ತಪ್ಪು. ಈಗಿರುವ ಜಾತಿ ಗಣತಿಯಲ್ಲಿ ಕೆಲವೊಂದು ದುರದ್ದೇಶಗಳು ಕಾಣುತ್ತಿದ್ದು, ಹೊಸ ಜಾತಿಗಣತಿ ನಡೆಸುವಂತೆ ವೀರಶೈವ ಲಿಂಗಾಯತ ಸಮುದಾಯ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!