ನವದೆಹಲಿ : ಡಿಸೆಂಬರ್ ೧೩ (ಅಧಿವೇಶನದ ೮ ನೇ ದಿನ) ರಂದು ಸಂಸತ್ ಭದ್ರತೆ ಉಲ್ಲಂಘಿಸಿದ ೬ ಜನರ ಪೈಕಿ ಐವರು ಪೊಲೀಸರ ವಶದಲ್ಲಿದ್ದಾರೆ. ಬುಧವಾರ ನೂತನ ಸಂಸತ್ ಕಲಾಪದ ವೇಳೆಯಲ್ಲಿ ಇಬ್ಬರು ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು, ಘೋಷಣೆ ಕೂಗತೊಡಗಿದರು. ಅಲ್ಲದೇ ಹಳದಿ ಬಣ್ಣದ ಸ್ಮೋಕ್ ಕ್ಯಾನ್‌ಗಳನ್ನು ಹರಡಿದ್ದರು. ಈ ಇಬ್ಬರನ್ನು ತಕ್ಷಣವೇ ಪೊಲೀಸರು ಬಂಧಿಸಿದ್ದರು. ಮತ್ತೆ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣದ ಬಗ್ಗೆ ಆರೋಪಿಗಳು ಮಾತನಾಡಿದ್ದಾರೆ. ತಾವು ವಿವಿಧ ವಿಚಾರಗಳ ಕುರಿತು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಮಣಿಪುರ ಹಿಂಸಾಚಾರ, ರೈತರ ಸಮಸ್ಯೆ, ನಿರುದ್ಯೋಗ ಇನ್ನು ಮುಂತಾದ ದೇಶದ ಸಮಸ್ಯೆಗಳ ಬಗ್ಗೆ ಸಂಸದರು ಚರ್ಚೆ ನಡೆಸಬೇಕು ಎಂಬ ತಮ್ಮ ಬೇಡಿಕೆಗಳತ್ತ ಗಮನ ಸೆಳೆಯುವ ನಿಟ್ಟಿನಲ್ಲಿ ಬಣ್ಣದ ಹೊಗೆಯನ್ನು ಬಳಸಲಾಯಿತು ಎಂದು ಆರೋಪಿಗಳು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಬುಧವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ ಒಬ್ಬಾತ ತಾನು ಯಾವುದೇ ಸಂಘಟನೆಗೆ ಸೇರಿದವನಲ್ಲ. ನಾವು ವಿದ್ಯಾರ್ಥಿಗಳಾಗಿದ್ದು, ನಿರುದ್ಯೋಗಿಗಳಾಗಿದ್ದೇವೆ. ನಮ್ಮಲ್ಲಿ ಹಲವಾರು ಜನರ ಪೋಷಕರು ಕಾರ್ಮಿಕರು, ರೈತರು ಹಾಗೂ ಅಂಗಡಿ ಮಾಲೀಕರಾಗಿದ್ದು, ನಮ್ಮ ಧನಿಯನ್ನು ಅಡಗಿಸಲಾಗುತ್ತಿದೆ ಎಂದು ಹೇಳಿದ್ದ.
ದೆಹಲಿಯ ಪೊಲೀಸ್ ವಿಶೇಷ ಘಟಕ ಈ ಪ್ರಕರಣದ ತನಿಖೆ ಮಾಡುತ್ತಿದ್ದೆ. ಇತ್ತು ಬಂಧಿತ ಆರೋಪಿಗಳಿಗೆ ಯಾವುದೇ ಸಂಘಟನಯೆ ನಂಟು ಇದೆಯಾ ಎಂಬ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇವರೆಲ್ಲರು ಭಗತ್ ಸಿಂಗ್ ಫ್ಯಾನ್ ಕ್ಲಬ್ ಎಂಬ ಸಾಮಾಜಿಕ ಜಾಲತಾಣದಲ್ಲಿನ ಪೇಜ್‌ನಲ್ಲಿ ಸಂಬಂಧ ಹೊಂದಿದ್ದರು. ೯ ತಿಂಗಳ ಹಿಂದೆ ಸಂಸತ್ ಪ್ರವೇಶಿಸುವ ಬಗ್ಗೆ ಭೆಟಿಯಾಗಿ ಚರ್ಚಿಸಿದ್ದರು. ಡಿಸೆಂಬರ್ ೧೦ ರಂದು ಎಲ್ಲರೂ ತಮ್ಮ ತಮ್ಮ ರಾಜ್ಯಗಳಿಂದ ಹೊರಟು ದೆಹಲಿ ತಲುಪಿದರು. ಬುಧವಾರ ೧೨ ಗಂಟೆಗೆ ಸಂಸತ್ ಪ್ರವೇಶಿಸಿ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಸ್ಮೋಕ್ ಕ್ಯಾನ್ ತೆಗೆದರು. ಅಲ್ಲದೇ ಮತ್ತೊಬ್ಬ ಸದನದಲ್ಲಿ ಹಳದಿ ಬಣ್ಣ ಎರಚಿದನು.
೨೦೦೧ರ ಡಿಸೆಂಬರ್ ನಲ್ಲಿ ನಡೆದ ಉಗ್ರರ ದಾಳಿಯ ನಡುವೆ ಈ ಭದ್ರತಾ ಲೋಪ ಕಂಡುಬಂದಿದೆ. ಸಂಸತ್ ನಲ್ಲಿ ೪ ಲೇಯರ್ ಭದ್ರತೆ ಇದ್ದೂ ಸಹಾ ಅದನ್ನು ಬೇಧಿಸಿ ಈ ಘಟನೆ ನಡೆದದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.