Mysore
24
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವಾರಕ್ಕೆ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದು ಕಡ್ಡಾಯ : ನಾರಾಯಣ ಮೂರ್ತಿ

ನವದೆಹಲಿ : ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಕಂಪನಿಯ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ಕಚೇರಿಯಲ್ಲಿಯೇ ಬಂದು ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.
ಸಾಮಾನ್ಯ ಕಚೇರಿ ದಿನಚರಿಯನ್ನು ಪುನರಾರಂಭಿಸಲು ಆಡಳಿತ ಮಂಡಳಿಯ ವಿನಂತಿಗಳು ಫಲಿತಾಂಶಗಳನ್ನು ನೀಡಲು ವಿಫಲವಾದ ಬಳಿಕ ಕಚೇರಿಯ ದಿನಚರಿಯನ್ನು ಪುನರಾರಂಭವನ್ನು ಕಡ್ಡಾಯಗೊಳಿಸಲು ಕಂಪನಿಯು ಚಿಂತನೆ ನಡೆಸಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.
ಈ ಬಗ್ಗೆ ಉದ್ಯೋಗಿಗಳಿಗೆ ಮೇಲ್‌ ಮಾಡಿರುವ ಕಂಪನಿಯು, ದಯವಿಟ್ಟು ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಗೆ ಬರಲು ಪ್ರಾರಂಭಿಸಿ. ಈ ನಿಯಮ ಶೀಘ್ರವೇ ಕಡ್ಡಾಯವಾಗಲಿದೆ. ಕೋವಿಡ್‌ 19 ಸಾಂಕ್ರಾಮಿಕ ರೋಗದ ಬಳಿಕ ಮೂರು ವರ್ಷಗಳ ಕಾಲ ಮನೆಯಿಂದಲೇ ಕೆಲಸ ನಿರ್ವಹಿಲು ಅವಕಾಶ ನೀಡಿದ್ದೇವೆ. ಇದು ಸಾಕಷ್ಟು ಧೀರ್ಘಾವಧಿಯಾಗಿದೆ. ವೈದ್ಯಕೀಯ ಕಾರಣಗಳಿಂದಾಗಿ ವಿನಾಯಿತಿಗಳನ್ನು ಹೊರತುಪಡಿಸಿ, ಇನ್ನುಳಿದ ನೌಕರರು ಕಚೇರಿಗೆ ಬಂದು ಕೆಲಸ ಮಾಡಲು ಪ್ರಾರಂಭಿಸಬೇಕು ಎಂದು ಕಂಪನಿಯು ಹೇಳಿದೆ.
ಯುವಕರು ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಹಲವರ ಟೀಕೆಗೆ ಕಾರಣವಾಗಿದ್ದ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ನಾರಾಯಣ ಮೂರ್ತಿ ಅವರು, ತಾವು ಕಂಪನಿ ಸ್ಥಾಪನೆ ಮಾಡುವ ಸಂಧರ್ಭಲ್ಲಿ ತಾನು ಬೆಳಗ್ಗೆ 6 20 ಕ್ಕೆ ಕಚೇರಿಗೆ ಹೋದರೆ ರಾತ್ರಿ 8 30 ಕ್ಕೆ ಮನೆಗೆ ಹೋಗುತ್ತಿದ್ದೆ. 40 ವರ್ಷಗಳ ಕಾಲ ವಾರದ ಆರು ದಿನಗಳು 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಎಂದು ಹೇಳುವ ಮೂಲಕ ತಾವು ನೀಡಿದ್ದ 70 ಗಂಟೆಗಳ ಕೆಲಸದ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು.
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ