ಬೆಳಗಾವಿ : ರೈತರು ದೇವರ ಸಮಾನ. ಶಿವಸ್ವರೂಪಿಗಳು ಅವರ ಹಣ ತಿಂದ್ರೆ ಪ್ಯಾರಾಲಿಸಿಸ್ ಬರುತ್ತೆ ಅಂತ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ ಮಾತನಾಡಿರುವ ಶಾಸಕ ಲಕ್ಷ್ಮಣ ಸವದಿ ರೈತರು ದೇವರ ಸಮಾನ. ಶಿವಸ್ವರೂಪಿಗಳು ಅವರ ಹಣ ತಿಂದ್ರೆ ಪ್ಯಾರಲಿಸಿಸ್ ಬರುತ್ತೆ. ರೈತರ ಹಣ ತಿಂದ ಮಾಲಿಕರು ಉದ್ದಾರ ಆಗಲ್ಲ. ಅನ್ನದಾತರಿಗೆ ಮೋಸ ಮಾಡಬೇಡಿ ಎಂದಿದ್ದಾರೆ.
ನಿಯಮ 69 ರ ಅಡಿಯಲ್ಲಿ ಕಬ್ಬು ಕಾರ್ಖಾನೆಗಳಲ್ಲಿ ಆಧುನಿಕ ತೂಕದ ಯಂತ್ರಗಳನ್ನು ಅಳವಡಿಸುವ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತು ಆರಂಭಿಸುತ್ತಿದ್ದಂತೆಯೇ ವಿಪಕ್ಷ ಶಾಸಕರು ಸದನದ ಭಾವಿಯಲ್ಲಿ ನಿಂತು ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸವದಿ ನೀವು ಕಬ್ಬು ಬೆಳೆಗಾರರ ವಿರೋಧಿಗಳು, ಹೊರಗೆ ಹೋದರೆ ಜನ ನಿಮಗೆ ಕಬ್ಬು ತಗೊಂಡು ಹೊಡಿತಾರೆ ಎಂದು ಎಚ್ಚರಿಸಿದರು.
ಇನ್ನು ತಮ್ಮ ಚರ್ಚೆಗೆ ಅಡ್ಡಿ ಪಡಿಸಿದ ಶಿವಮೊಗ್ಗ ನಗರದ ಶಾಸಕ ಚನ್ನಬಸಪ್ಪ ಅವರ ವಿರುದ್ಧ ಸಿಟ್ಟಾದ ಸವದಿ, ಶಿವಮೊಗ್ಗದವರು ಉತ್ತರ ಕರ್ನಾಟಕ ವಿರೋಧಿಗಳು. ನಿನ್ನ ಯಾರು ಕೀಲಿ ಕೊಟ್ಟು ಇಲ್ಲಿಗೆ ಕೂಗಲು ಕಳಿಸಿದ್ದಾರೆ ಅಂತಾ ಗೊತ್ತಿದೆ. ಕೂಗೂ ಜೋರಾಗಿ ಕೂಗು ಎಂದು ಕಿಡಿ ಕಾರಿದರು.