Mysore
24
broken clouds

Social Media

ಬುಧವಾರ, 15 ಜನವರಿ 2025
Light
Dark

ನನ್ನ ಮೇಲೆ ದಾಳಿಗೆ ಸಿಎಂ ಪಿಣರಾಯಿ ಸಂಚು: ಕೇರಳ ರಾಜ್ಯಪಾಲ ಗಂಭೀರ ಆರೋಪ

ತಿರುವನಂತಪುರಂ : ತಮಗೆ ದೈಹಿಕವಾಗಿ ಹಾನಿ ಮಾಡಲು ಪಿಣರಾಯಿ ವಿಜಯನ್ ಅವರು ಸಂಚು ನಡೆಸಿದ್ದಾರೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೇರಳ ಸಿಎಂ ಮೇಲೆ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯಪಾಲರು, ತಮಗೆ ದೈಹಿಕವಾಗಿ ಘಾಸಿ ಉಂಟುಮಾಡಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ತಮ್ಮನ್ನು ವ್ಯಕ್ತಿಗತವಾಗಿ ಗುರಿ ಮಾಡುವ ಉದ್ದೇಶಪೂರ್ವಕ ಕೃತ್ಯ ಇದಾಗಿದ್ದು, ಇದರಲ್ಲಿ ಸ್ವತಃ ಸಿಎಂ ಪಿಣರಾಯಿ ವಿಜಯನ್ ಭಾಗಿಯಾಗಿರುವುದನ್ನು ಇದು ಸೂಚಿಸುತ್ತದೆ ಎಂದು ಅವರು ದೂರಿದರು.

ಆಡಳಿತಾರೂಢ ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಘಟಕ, ಎಸ್‌ಎಫ್‌ಐ (ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ) ಸದಸ್ಯರ ನಡುವಿನ ಗುಂಪು ಘರ್ಷಣೆ ವೇಳೆ, ಎರಡು ಗುಂಪುಗಳ ನಡುವೆ ರಾಜ್ಯಪಾಲರ ವಾಹನ ಸಿಲುಕಿಕೊಂಡಿತ್ತು. ರಾಜ್ಯಪಾಲರ ವಾಹನದ ಮೇಲೆ ಕೆಲವು ಕಾರ್ಯಕರ್ತರು ವ್ಯವಸ್ಥಿತವಾಗಿ ದಾಳಿ ನಡೆಸಿದ್ದರು ಎಂದು ಆರಿಫ್ ಖಾನ್ ಹೇಳಿಕೆ ನೀಡಿದ್ದಾರೆ.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನವದೆಹಲಿಗೆ ತೆರಳು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಇದು ಸದ್ಯ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಠಿಸಿದೆ.

ಸಿಎಂ ಕಾರ್ಯಕ್ರಮ ನಡೆಯುವ ವೇಳೆ ಬೇರೆ ಯಾವುದೇ ಪ್ರತಿಭಟನೆ ನಡೆಯಲು ಪೊಲೀಸರು ಬಿಡುತ್ತಾರೆಯೇ? ಸಿಎಂ ಕಾರಿನ ಬಳಿ ಯಾರಿಗಾದರು ಬರಲು ಪೊಲೀಸರು ಬಿಡುವರೇ? ಆದರೆ ನಮ್ಮ ಕಾರಿನ ಮೇಲೆ ದಾಳಿ ನಡೆದರೂ ಪೊಲೀಸರು ಸುಮ್ಮಿದ್ದದ್ದು ಯಾಕೆ? ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ, ನನಗೆ ದೈಹಿಕವಾಗಿ ಘಾಸಿ ಮಾಡಲು ಸಂಚು ರೂಪಿಸಿರುವ ಸಿಎಂ ಜನರನ್ನು ಕಳುಹಿಸಿದ್ದಾರೆ. ತಮ್ಮ ಕಾರಿನ ಮೇಲಿನ ದಾಳಿ ಕೇರಳದಲ್ಲಿ ಪ್ರಜಾಪ್ರಭುತ್ವ ಕುಸಿತಕ್ಕೆ ಕಾರಣವಾಗಬಹುದು ಮತ್ತು ರಾಜಕೀಯ ಬಿನ್ನಾಭಿಪ್ರಾಯಗಳು ದೈಹಿಕ ದ್ವೇಷಕ್ಕೆ ಪುಷ್ಠಿ ನೀಡಬಹುದಾಗಿದೆ ಎಂದು ದೂರಿದ್ದಾರೆ.

ಒಂದು ನಿರ್ದಿಷ್ಟ ಜಾಗದಲ್ಲಿ ರಾಜ್ಯಪಾಲ ಖಾನ್ ಅವರ ವಾಹನಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಸಂಘಟನೆಯ ಏಳು ಮಂದಿ ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ