ಮಧ್ಯಪ್ರದೇಶ : ಮಧ್ಯಪ್ರದೇಶದ ನೂತನ ಸಿಎಂ ಆಗಿ ಡಾ. ಮೊಹನ್ ಯಾದವ್ ಅವರು ನೇಮಕಗೊಂಡಿದ್ದಾರೆ. ಇಂದು ನಡೆದ ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನಿರಾಸೆಯಾಗಿದೆ.
ನರೇಂದ್ರ ಸಿಂಗ್ ತೋಮರ್‌ಗೆ ಅವರಿಗೆ ಸ್ಪೀಕರ್ ಸ್ಥಾನ ನೀಡಲಾಗಿದೆ. ಆ ಮೂಲಕ ಬಿಜೆಪಿ ಹೊಸ ಮುಖಕ್ಕೆ ಮಣೆಹಾಕಿದೆ.
ಮಧ್ಯಪ್ರದೆಶ ಮತ್ತು ಛತ್ತೀಸ್ಗಢ ಎರಡರಲ್ಲಿಯೂ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಮಧ್ಯಪ್ರದೇಶ ಡಿಸಿಎಂ ಗಳಾಗಿ ಜಗದೀಶ್ ದೇವಡಾ ಮತ್ತು ರಾಜೇಶ್ ಶುಕ್ಲಾ ಆಯ್ಕೆಯಾಗಿದ್ದಾರೆ.
ಉಜ್ಜೈನ ದಕ್ಷಿಣ ಕೇತ್ರದ ಅಭ್ಯರ್ಥಿಯಾಗಿರುವ ಇವರು ೨೦೧೩ ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಇವರು ಶಿವರಾಜ್ ಸಿಂಗ್ ಚೌಹಾಣ್ ಸಂಪುಟದಲ್ಲಿ ಉನ್ನತ ಶಿಕ್ಷಣಸಚಿವರಾಗಿಯೂ ಕೆಲಸ ಮಾಡಿದ್ದರು.