ನವದೆಹಲಿ : ನಾನು 40 ವರ್ಷಗಳ ಕಾಲ ವಾರದ ಆರು ದಿನಗಳು 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿರುವ ನಾರಾಯಣ ಮೂರ್ತಿ ಅವರು ತಾವು ಕಂಪನಿ ಸ್ಥಾಪನೆ ಮಾಡುವ ಸಂಧರ್ಭಲ್ಲಿ ನಾನು ಬೆಳಗ್ಗೆ 6 20 ಕ್ಕೆ ಕಚೇರಿಗೆ ಹೋದರೆ ರಾತ್ರಿ 8 30 ಕ್ಕೆ ಮನೆಗೆ ಹೋಗುತ್ತಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ತಾವು ನೀಡಿದ್ದ 70 ಗಂಟೆಗಳ ಕೆಲಸದ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಳೆದ ಅಕ್ಟೋಬರ್ ನಲ್ಲಿ ಇನ್ಫೋಸಿಸ್ ಮಾಜಿ ಸಿಎಫ್‌ಒ ಮೋಹನ್ ದಾಸ್ ಪೈ ಅವರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಾರಾಯಣ ಮೂರ್ತಿಯವರು ನಾವು ಪಾಶ್ಚಿಮಾತ್ಯರಿಂದ ಅನಪೇಕ್ಷಿತ ಹವ್ಯಾಸಗಳನ್ನು ಕಲಿಯಬಾರದು. ಭಾರತ ನನ್ನ ದೇಶ ಇದಕ್ಕಾಗಿ ನಾನು ವಾರಕ್ಕೆ 70 ಗಂಟೆಗಳ ಕಾಲ ದುಡಿಯುತ್ತೇನೆ ಎನ್ನುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಯುವ ಜನತೆಗೆ ಕರೆ ನೀಡಿದ್ದರು.
ನಾರಾಯಣ ಮೂರ್ತಿಯವರ ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಠೀಕೆಗೆ ಕಾಣವಾಗಿತ್ತು. ಕಾಂಗ್ರೆಸ್ ನಾಯಕರು ಕೂಡ ನಾರಾಯಣಮೂರ್ತಿಯವರ ಹೇಳಿಕೆಯನ್ನು ಖಂಡಿಸಿದ್ದರು. ಮೂರ್ತಿಯವರು ಸಹಾನುಭೂತಿಯ ಬಂಡವಾಳಶಾಹಿ ಇರಬೇಕು. ಆದರೆ ಕೆಲವು ಕಪನಿಗಳು ಮಾತ್ರ ಅದನ್ನು ಪ್ರದರ್ಶಿಸುತ್ತಿವೆ. ಸಹಾನುಭೂತಿಯ ಬಂಡವಾಳಶಾಹಿ ಇದ್ದಿದ್ದರೆ ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆ ಕಾಯ್ದೆಯನ್ನು ತರುವ ಅಗತ್ಯ ಏನಿತ್ತು ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ನಾರಾಯಣ ಮೂರ್ತಿಯವರ ವಿರುದ್ಧ ಕಿಡಿ ಕಾರಿದ್ದರು. ಕಳೆದ ದಶಕಗಳ ಬಡತನದ ಸೂಚ್ಯಾಂಕವನ್ನು ಪರಿಗಣನೆಗೆ ತೆಗೆದುಕೊಂಡರೆ ಬಡವರು ಬಡವರಾಗಿಯೇ ಇರುತ್ತಿದ್ದಾರೆ. ಅವರ ಸಲಹೆಗಳು ಜನರ ಅಭಿವೃದ್ಧಿಯ ಭಾಗವಾಗಿದೆ. ಇದು ಅಂತಿಮವಾಗಿ ಸರ್ಕಾರದ ನಿರ್ಧಾರವಾಗಿದೆ ಎಂದಿದ್ದರು.