Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಐಶ್ವರ್ಯ ರೈರನ್ನು ಅನ್‌ ಫಾಲೋ ಮಾಡಿದ ಬಿಗ್‌ಬಿ: ನಿಜವಾಗುತ್ತಾ ಡೈವರ್ಸ್‌ ವದಂತಿ?

ಬಾಲಿವುಡ್‌ ಬಿಗ್‌ ಬಿ ಎಂದೆ ಖ್ಯಾತರಾಗಿರುವ ಅಮಿತಾಭ್ ಬಚ್ಚನ್‌ ಕುಟುಂಬದಲ್ಲಿ ಬಿರುಕು ಮೂಡಿದೆ ಎಂಬ ವದಂತಿಸತ್ಯವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಅಮಿತಾಭ್‌ ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ವೈವಾಹಿಕ ಕುಟುಂಬದಲ್ಲಿ ಬಿರುಕು ಮೂಡಿದ್ದು ವಿಚ್ಛೇಧನ ಪಡೆಯಲಿದ್ದಾರೆ ಎಂಬ ವದಂತಿ ಕೆಲ ದಿನಗಳಿಂದ ಎಲ್ಲೆಡೆ ಹಬ್ಬಿತ್ತು.

ಆದರೆ ಒಂದು ವಾರದ ಹಿಂದೆ ಖಾಸಗಿ ಸಮಾರಂಭ ಒಂದರಲ್ಲಿ ಬಿಗ್‌ ಬಿ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಕಂಡಿದ್ದು, ಎಲ್ಲಾ ವದಂರತಿಗಳಿಗೆ ತೆರೆ ಎಳೆದಿತ್ತು. ಇದೀಗ ಬಿಗ್‌ ಬಿ ಅವರೇ ಈ ವಿಚಾರಕ್ಕೆ ಜೀವ ಕೊಟ್ಟಿದ್ದಾರೆ.

ಇನ್ಸ್ಟಗ್ರಾಮ್‌ ಖಾತೆಯಲ್ಲಿ ತಮ್ಮ ಸೊಸೆ ಏಶ್ವರ್ಯ ರೈ ಅವರನ್ನು ಅನ್‌ ಫಾಲೊ ಮಾಡಿದ್ದಾರೆ. ಆದರೆ ಇನ್ನೊಂದೆಡೆ ಐಶ್ವರ್ಯ ರೈ ಅವರು ಬಿಗ್‌ ಬಿ ಅವರನ್ನು ಇನ್ನೂ ಫಾಲೊ ಮಾಡುತ್ತಿದ್ದಾರೆ.

ಬಿಗ್‌ ಬಿ ಅವರ ಈ ನಡೆ ಹಲವಾರು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ವೇಳೆ ಎಲ್ಲೆಡೆ ಹಬ್ಬಿರುವ ಅಭಿಷೇಕ್‌ ಹಾಗೂ ಐಶ್ವರ್ಯ ರೈ ಅವರ ವಿಚ್ಛೇಧನ ವದಂತಿಗೆ ಬಿಗ್‌ ಬಿ ಅವರ ಈ ನಡೆ ಸ್ಪಷ್ಟನೆ ನೀಡುತ್ತಿದೆಯೇ ಎಂದು ಕಾದು ನೋಡಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ