Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವನಸಿರಿನಾಡಲ್ಲಿ ಜೀತ ಪದ್ಧತಿ ಇನ್ನೂ ಜೀವಂತ : ತಾಲೂಕು ಆಡಳಿತದಿಂದ ಸಂತ್ರಸ್ಥರ ರಕ್ಷಣೆ

ಎಚ್.ಡಿ ಕೋಟೆ : ವನಸಿರಿನಾಡು ಹೆಗ್ಗಡದೇವನ ಕೋಟೆಯಲ್ಲಿ ಜೀತ ಪದ್ದತಿ ಇನ್ನೂ ಜೀವಂತವಾಗಿದೆ.

ತಾಲೂಕಿನ ಖೈಲಾಶಪುರ ಗ್ರಾಮದಲ್ಲಿ ನೇಪಾಳ ಮೂಲದ ಮಹಿಳೆ ನಿರ್ಮಲಾ ಹಾಗೂ ಆಕೆಯ ಮಕ್ಕಳನ್ನು ಈರೇಗೌಡ ಎಂಬ ವ್ಯಕ್ತಿ ಅಕ್ರಮವಾಗಿ ಜೀತಕ್ಕಿರಿಸಿಕೊಂಡಿದ್ದರು.

ಜೀತಕ್ಕಿರಿಸಿಕೊಂಡಿರುವ ಸ್ಥಳೀಯರಿಂದ ತಿಳಿಯುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ತಹಶೀಲ್ದಾರ್ ಶ್ರೀನಿವಾಸ್, ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆ ರಾಮಸ್ವಾಮಿ, ಗಿರಿಜನ ಅಭಿವೃದ್ದಿ ಇಲಾಖೆ ನಾರಾಯಣಸ್ವಾಮಿ ಜೀವಿಕ ಸಂಘಟನೆ ಉಮೇಶ್, ಬಸವರಾಜು ಎಎಸ್ ಐ ಸುಭಾನ್ ತಂಡ ಕಾರ್ಯಾಚರಣೆ ನಡೆಸಿ ಸಂತ್ರಸ್ಥರನ್ನು ರಕ್ಷಿಸಿದ್ದಾರೆ.

ಇನ್ನೂ ತಾಲೂಕು ಆಡಳಿತದ ರಕ್ಷಣೆಯಲ್ಲಿರುವ ನಿರ್ಮಲಾ ಅವರು ನಾವು ಈರೇಗೌಡ ಅವರ ಬಳಿ 48 ಸಾವಿರ ರೂ. ಸಾಲ ಪಡೆದಿದ್ದರಿಂದ ನಮ್ಮನ್ನು ಒಂದೂವರೆ ವರ್ಷದಿಂದ ಜೀತಕ್ಕಿರಿಸಿಕೊಂಡಿದ್ದರು. ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಸರಿಯಾಗಿ ಊಟ ಮತ್ತು ತಿಂಡಿ ಕೊಡುತ್ತಿರಲಿಲ್ಲ. ಬೆಳಗಿನ ಜಾವ 4ರಿಂದ ರಾತ್ರಿ 8ರವರೆಗೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು. 200 ರೂ. ಕೂಲಿ ಕೊಡುತ್ತಿದ್ದರು. 4 ತಿಂಗಳ ಹಿಂದೆ ಜಮೀನಿನಲ್ಲಿ ಕೆಲಸ ಇಲ್ಲದ ಕಾರಣ ಕೊಡಗು ಜಿಲ್ಲೆಗೂ ಕೆಲಸಕ್ಕೆ ಕಳುಹಿಸಿದ್ದರು, ಎಂದು ತಾಲೂಕು ಆಡಳಿತಕ್ಕೆ ತಿಳಿಸಿದ್ದಾರೆ.

ನಿರ್ಮಲಾಳ ಪತಿ ಗೋಪಾಲ ಕೊಡಗು ಜಿಲ್ಲೆಗೆ ಕೆಲಸಕ್ಕೆ ಹೋಗಿದ್ದು, ಇಂದು ಎಚ್.ಡಿ.ಕೋಟೆಗೆ ಬರಲಿದ್ದಾರೆ. ಗೋಪಾಲ ಅವರ ಕುಟುಂಬದವರು ನೇಪಾಳ ಮೂಲದವರಾಗಿದ್ದು, ಕೆಲಸಕ್ಕಾಗಿ 15 ವರ್ಷಗಳ ಹಿಂದೆ ನೇಪಾಳ ಬಿಟ್ಟು ಬಂದಿದ್ದು, ಬೆಂಗಳೂರು, ಶಿವಮೊಗ್ಗ ಮತ್ತಿತರ ಕಡೆ ಕೆಲಸ ಮಾಡಿದ್ದಾರೆ.

ಈ ಕುರಿತು ಎಚ್.ಡಿ.ಕೋಟೆ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಕುಟುಂಬವನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಜೀತಕ್ಕೆ ಇರಿಸಿಕೊಂಡಿದ್ದರು ಎನ್ನಲಾದ ಆರೋಪಿ ತಲೆ ಮರೆಸಿಕೊಂಡಿದ್ದಾರೆ, ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ