Mysore
24
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮಿಜೋರಾಂನ ಮುಖ್ಯಮಂತ್ರಿಯಾಗಿ ಲಾಲ್ದುಹೋಮ ಪ್ರಮಾಣವಚನ

ಮಿಝೋರಾಂ: ಬಹುಮತ ಪಡೆದು ಗೆದ್ದ ಪೀಪಲ್ಸ್ ಮೂವ್ ಮೆಂಟ್ ಪಕ್ಷದ ನೂತನ ಶಾಸಕಾಂಗ ನಾಯಕರಾಗಿ ಲಾಲ್ದುಹೋಮ ಆಯ್ಕೆಯಾಗಿದ್ದು, ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಝೋರಮ್ ಪೀಪಲ್ಸ್ ಮೂವ್ ಮೆಂಟ್ ನಾಯಕ ಲಾಲ್ದುಹೋಮ ಅವರಿಗೆ ರಾಜ್ಯಪಾಲ ಹರಿಬಾಬು ಕಂಭಂಪತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಅವರೊಂದಿಗೆ ಝೋರಮ್ ಪೀಪಲ್ಸ್ ಮೂವ್ ಮೆಂಟ್ ಪಕ್ಷದ ಇತರ ಹನ್ನೊಂದು ಮಂದಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮಿಝೋ ನ್ಯಾಷನಲ್ ಫ್ರಂಟ್ ನಾಯಕರು ಹಾಗೂ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಝೋರಾಂಥಂಗ ಉಪಸ್ಥಿತರಿದ್ದರು.

ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲ ಮಿಝೋ ನ್ಯಾಷನಲ್ ಫ್ರಂಟ್ ಶಾಸಕರು ಹಾಗೂ ಅದರ ಶಾಸಕಾಂಗ ಪಕ್ಷದ ನಾಯಕ ಲಾಲ್ ಛಂದಮ ರಾಲ್ಟೆ ಹಾಜರಿದ್ದರು. ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹವ್ಲಾ ಕೂಡಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!