Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ನನ್ನ ಕುಟುಂಬಕ್ಕೆ ಏನೇ ಆದ್ರೂ ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಸಹೋದರ ಕಾರಣ : ಪೃಥ್ವಿ ಸಿಂಗ್‌

ಬೆಳಗಾವಿ : ನನಗೆ ಮತ್ತು ನನ್ನ ಕುಟುಂಬಕ್ಕೆ ಏನೇ ಆದರೂ ಕೂಡ ಅದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ ಹಾಗೂ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಕಾರಣ ಎಂದು ಬಿಜೆಪಿ ಮುಖಂಡ ಪೃಥ್ವಿ ಸಿಂಗ್‌ ಹೇಳಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಖಾಸಗಿ ಮಾದ್ಯಮವೊಂದರ ಜೊತೆ ಮಾತನಾಡಿರುವ ಅವರು ಈ ಹಿಂದೆ ನಡೆದ ಚುನಾವಣೆಯ ಸಮಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಮಾಗ ನನಗೆ ಧಮ್ಕಿ ಹಾಕಿದ್ದ. ನನಗೆ ಚಾಕುವಿನಿಂದ ಹಲ್ಲೆ ಮಾಡಿದ ದಿನ ಚನ್ನರಾಜ್‌ ಬಂದಿದ್ದಾರೆ ಅಂತಾ ಕರೆದಿದ್ದರು ಅದಕ್ಕೆ ನಾನು ಮಾತನಾಡಲು ಹೋದೆ ಆಗ ಅವರ ಸಹಚರರಾದ ಸುಜಯ್‌ ಹಾಗೂ ಸದ್ದಾಂ ನನ್ನ ಮೇಲೆ ಹಲ್ಲೆ ಮಾಡಿದರು. ಆದರೆ ನಾನೆ ಕೈ ಕುಯ್ದುಕೊಂಡೆ ಎಂದು ಘಟನೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.

ಇನ್ನು ಪೃಥ್ವಿ ಸಿಂಗ್‌ ಅವರ ಮೇಲಿನ ಹಲ್ಲೆಯ ಕುರಿತಾಗಿ ಮಾತನಾಡಿದ್ದ ಚನ್ನರಾಜ ಹಟ್ಟಿಹೊಳಿಯವರು ಈ ಹಲ್ಲೆ ಆರೋಪ ಸತ್ಯಕ್ಕೆ ದೂರವಾದ ಮಾತು. ಇದೊಂದು ಸುಳ್ಳು ಆರೋಪ. ನಾವು ಶಿಸ್ತಿನಿಂದ ರಾಜಕಾರಣ ಮಾಡುತ್ತೇವೆ. ಹಲ್ಲೆ ಮಾಡುವಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಸ್ಪಷ್ಟ ಮಾಹಿತಿ ಹೊರಬರಬೇಕು. ಯಾರು ಹಲ್ಲೆ ಮಾಡಿದ್ದಾರೆ ಎನ್ನುವ ಬಗ್ಗೆ ಫಾರೆನ್ಸಿಕ್‌ ವರದಿ ಬರೆಬೇಕಾಗುತ್ತದೆ. ಪೊಲೀಸ್‌ ಇಲಾಖೆಯಲ್ಲಿ ಈ ಬಗ್ಗೆ ಅನುಮಾನಗಳಿವೆ. ನನ್ನ ವಿರುದ್ಧ ಶಡ್ಯಂತ್ರ ರೂಪಿಸಲಾಗಿದೆ ಈ ಹಲ್ಲೆ ಆರೋಪದಿಂದ ನನ್ನ ವರ್ಚಸ್ಸು ಹಾಳಾಗುತ್ತಿದೆ. ಪೃಥ್ವಿ ಸಿಂಗ್‌ ಅವರು ವಾಸವಿರುವ ಮನೆ ಈ ಮೊದಲು ನನ್ನ ಕಚೇರಿಯಾಗಿತ್ತು. ಹಾಗಾಗಿ ರೆಂಟ್‌ ಅಗ್ರಿಮೆಂಟ್‌ ವಾಪಸ್‌ ಕೇಳಲು ನನ್ನ ಸಹಚರರು ಹೋಗಿದ್ದರು ಅಷ್ಟೇ. ಪೃಥ್ವಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ