Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅರ್ಜುನನ ಸ್ಮಾರಕ ನಿರ್ಮಾಣ: ಸಚಿವ ಈಶ್ವರ್‌ ಖಂಡ್ರೆ

ಮೈಸೂರು: ನಾಡಹಬ್ಬ ದಸರಾದಲ್ಲಿ 8 ಬಾರಿ ಅಂಬಾರಿಯನ್ನು ಹೊತ್ತ ಆನೆ ಅರ್ಜುನ ಕಾಡಾನೆ ದಾಳಿಯಲ್ಲಿ ವೀರ ಮರಣ ಹೊಂದಿದ್ದಾನೆ. ಇದೀಗ ಆತನ ಹೆಸರಿನಲ್ಲಿ ವಿಶೇಷ ಸ್ಮಾರಕ ಒಂದನ್ನು ನಿರ್ಮಾಣ ಮಾಡಲಾಗುವುದ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಈ ಬಗ್ಗೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿರುವ ಸಚಿವರು, ಹಾಸನದ ಸಕಲೇಶ್‌ಪುರದ ಬಳಿ ಕಾಡಾನೆ, ಒಂಟಿಸಲಗ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಪುಂಡಾನೆಯೊಂದಿಗೆ ಕಾದಾಡಿ ವೀರ ಮರಣ ಹೊಂದಿದ್ದಾನೆ ಎಂದರು.

ಅರ್ಜುನನ ಸಾವು ನಾಡಿನ ಜನತೆಗೆ ಅತೀವ ನೋವುಂಟು ಮಾಡಿದೆ. ಅರ್ಜುನ ಕೇವಲ ಆನೆಯಲ್ಲ, ನಾಡಿನ ಜನತೆಯೊಂದಿಗಿನ ಭಾವನಾತ್ಮಕ ಸಂಬಂಧ. ಅರ್ಜುನನ ಸೇವೆಯನ್ನು ನಾಡಿನ ಜನತೆ ಸಧಾ ಸ್ಮರಿಸುವಂತೆ ಹಾಸನ ಮತ್ತು ಮೈಸೂರಿನಲ್ಲಿ ಅರ್ಜುನನ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಅರಣ್ಯ ಸಿಬ್ಬಂಧಿಗೆ ಸೂಕ್ತ ತರಬೇತಿ ನೀಡಿ:
ಕಾಡು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಡಿಗೆ ಬರುತ್ತಿವೆ. ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯಾಧೀಕಾರಿಗಳು ಮತ್ತು ಸಿಬ್ಬಂಧಿಗಳು ತೊಡಗಿದ್ದಾರೆ. ಈ ವೇಳೆ ಆನೆಗಳು ಮತ್ತು ಅರಣ್ಯ ಸಿಬ್ಬಂಧಿಳು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಸೂಕ್ತ ತರಬೇತಿ ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಇದನ್ನು ತಡೆಯಲು ಅರಣ್ಯಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ