Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಗುಜರಾತ್‌ ಜೈಂಟ್ಸ್‌ ಗೆ ಹ್ಯಾಟ್ರಿಕ್‌ ಗೆಲುವು

ಅಹ್ಮದಾಬಾದ್‌ : ಇಲ್ಲಿನ ಅರೆನಾ ಟ್ರಾನ್ಸ್‌ ಸ್ಟೇಡಿಯಂ ನಲ್ಲಿ ನಡೆದ ಯು ಮುಂಬಾ ಮತ್ತು ಗುಜರಾತ್‌ ನಡುವಿನ ಕಬಡ್ಡಿ ಪಂದ್ಯದಲ್ಲಿ ಗುಜರಾತ್‌ 39-37 ಅಂತರದಿಂದ ಗೆಲುವು ಸಾಧಸಿದೆ.

ಗುಜರಾತ್‌ ಪರ ಸೊನು ಜಗ್ಲನ್‌ 11 ಪಾಯಿಂಟ್‌ ಪಡೆದರು. ಇವರಿಗೆ ರಾಕೇಶ್‌ 9, ರೋಹಿತ್‌ 7, ಮತ್ತು ಫಾಜೆಲ್‌ 5 ಪಾಯಿಂಟ್‌ ಕೊಡುಗೆ ನೀಡುವ ಮೂಲಕ ರೋಚಕ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಯು ಮುಂಬಾ ತಂಡದಲ್ಲಿ ಪಂದ್ಯದುದ್ದಕ್ಕೂ ಅಮೋಘ ಪ್ರದರ್ಶನ ತೋರಿದರು ಸಹಾ ಗೆಲುವು ಪಡೆಯುವಲ್ಲಿ ವಿಫಲರಾದರು. ಗುಮಾನ್‌ ಸಿಂಗ್‌ ಮತ್ತು ಅಮೀರ್‌ ಮೊಹಮದ್‌ ತಲಾ 10 ಪಾಯಿಂಟ್‌ ಪಡೆದರು ಸಹಾ ತಂಡವನ್ನು ಗೆಲುವಿನ ದಡ ಸೇರಿಸಲು ಶ್ರಮಿಸಿದರು ಆದರು ಸಹಾ ಗೆಲ್ಲಲು ಸಾಧ್ಯವಾಗಲಿಲ್ಲ.

ಯು ಮುಂಬಾ ವಿರುದ್ಧ ಗೆಲುವು ದಾಖಲಿಸಿದ ಗುಜರಾತ್‌ ಜೈಂಟ್ಸ್‌ ತಂಡ ಈ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿಯೂ ಗೆಲುವು ಕಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!