Mysore
22
overcast clouds

Social Media

ಶನಿವಾರ, 03 ಜನವರಿ 2026
Light
Dark

ಸಂತೋಷಂ ಅವಾರ್ಡ್ಸ್ ನಲ್ಲಿ ಕನ್ನಡ ಕಲಾವಿದರಿಗೆ ಅವಮಾನ: ಕ್ಷಮೆಯಾಚಿಸಿದ ಮೆಗಾಸ್ಟಾರ್ ಚಿರಂಜೀವಿ ಪಿಆರ್‌ಒ

ಬೆಂಗಳೂರು : ಗೋವಾದಲ್ಲಿ ನಡೆದ ಸಂತೋಷಂ ಅವಾರ್ಡ್ಸ್ ಫಂಕ್ಷನ್‌ ನಲ್ಲಿ ರಮೇಶ್‌ ಅರವಿಂದ್‌ ಸೇರಿದಂತೆ ಕನ್ನಡ ಕಲಾವಿದರಿಗೆ ಮೆಗಾಸ್ಟಾರ್ ಚಿರಂಜೀವಿ ಪಿಆರ್‌ಒ ಸುರೇಶ್ ಕೊಂಡೇಟಿಯಿಂದ ದೊಡ್ಡ ಅವಮಾನವಾಗಿದೆ ಎಂದು ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಕನ್ನಡಿಗರಿಗೆ ಪಿಆರ್‌ಓ ಸುರೇಶ್‌ ಕ್ಷಮೇಯಾಚಿಸಿದ್ದಾರೆ.

ಗೋವಾದಲ್ಲಿ ಸಂತೋಷಂ ಅವಾರ್ಡ್ಸ್‌ ನೀಡಲು ಕನ್ನಡ ಸ್ಟಾರ್ಸ್‌ಗೆ ಸುರೇಶ್‌ ಆಹ್ವಾನ ನೀಡಿದ್ದರು ಸುರೇಶ್‌. ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಕ್ರಾಂತಿ ಸಿನಿಮಾಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವಾರ್ಡ್ ನೀಡುತ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಆಗಿದ್ದು, ಆಯೋಜನೆಯಲ್ಲಿ ಮಹಾ ಎಡವಟ್ಟು ಸಂಭವಿಸಿದೆ.

ಕನ್ನಡಿಗರಿಗೆ ತೆಲುಗು ಆಯೋಜಕರಿಂದ ನಡೆದ ಅವಮಾನವನ್ನು ಸಹಿಸದ ಕನ್ನಡ ಕಲಾವಿದರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ಬೆಂಗಳೂರಿಗೆ ಮರಳಿದ್ದಾರೆ. ಈ ಅವಾರ್ಡ್‌ ಶೋನಲ್ಲಿ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಸೇರಿದಂತೆ ಸುಮಾರು 35 ಮಂದಿ ಕನ್ನಡದ ಸ್ಟಾರ್ಸ್‌ಗಳು ಭಾಗಿಯಾಗಿದ್ದರು ಎನ್ನಲಾಗಿದೆ.

ಗೋವಾದಲ್ಲಿ ನಡೆದ ಸಂತೋಷಂ ಅವಾರ್ಡ್ಸ್ ಫಂಕ್ಷನ್ ನಲ್ಲಿ ನಡೆದ ಘಟನೆ ಮತ್ತು ಎಡವಟ್ಟುಗಳಿಗೆ ಆಯೋಜಕ ಸುರೇಶ್ ಕೊಂಡೇಟಿ ಕ್ಷಮೆ ಕೇಳಿದ್ದಾರೆ‌. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿರುವ ಅವರು, 1,200 ಮಂದಿ ಸೆಲೆಬ್ರಿಟೀಸ್​ಗೆ ಆತಿಥ್ಯ ನೀಡೋದ್ರಲ್ಲಿ ಏರುಪೇರಾಗಿದೆ. ಇದು ಉದ್ದೇಶಪೂರ್ವಕವಾಗಿ ಆಗಿರೋದಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ನನಗೆ ನಾಲ್ಕು ಚಿತ್ರರಂಗದ ತಾರೆಯರೆಲ್ಲಾ ಒಂದೇ. ಅದರಲ್ಲಿ ಯಾವುದೇ ತಾರತಮ್ಯ ಇಲ್ಲ. ಕಂಪ್ಲೀಟ್ ಆಗಿ ಇದು ನಾನೊಬ್ಬನೇ ನೀಡ್ತಾ ಬರ್ತಿರೋ ಪ್ರಶಸ್ತಿ ಪ್ರದಾನ ಸಮಾರಂಭ.‌ ಇದಕ್ಕೂ ತೆಲುಗು ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನಿಂದ ತೊಂದರೆಗೊಳಗಾದ ಪ್ರತಿಯೊಬ್ಬರಿಗೂ ಕ್ಷಮೆ ಯಾಚಿಸುತ್ತೇನೆ ಎಂದು ಸುರೇಶ್ ಕೊಂಡೇಟಿ ತಮ್ಮ ಪೋಸ್ಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Image

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!