Mysore
26
haze

Social Media

ಗುರುವಾರ, 01 ಜನವರಿ 2026
Light
Dark

ರಾಜಸ್ಥಾನದಲ್ಲಿ ಸಿಎಂ ಪೈಪೋಟಿಯಲ್ಲಿರುವವರು ಯಾರು?

ರಾಜಸ್ಥಾನ: ರಾಜಸ್ಥಾನದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚನೆ ಮಾಡುವುದು ಬಹುತೇಕ ಕಚಿತವಾಗಿದೆ. 199 ಕ್ಷೇತ್ರಗಳಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಈ ಮಧ್ಯ ಈಗಾಗಲೇ ರಾಜಸ್ಥಾನದಲ್ಲಿ ಸಿಎಂ ಆಗುವವರು ಯಾರು ಎಂಬ ಪ್ರಶ್ನೆ, ಗೊಂದಲ ಎಲ್ಲರಲ್ಲೂ ಮನೆ ಮಾಡಿದೆ.

ಅನೇಕ ನಾಯಕರ ಹೆಸರು ಕೇಳಿ ಬಂದಿದ್ದು, ಈ ಮಧ್ಯೆ ವಸುಂಧರಾ ರಾಜೆ ಸಿಂದ್ಯ ಮತ್ತು ಮಹಂತ್ ಬಾಲಕನಾಥ್ ಸಿಎಂ ಆಗಬಹುದು ಎನ್ನಲಾಗುತ್ತಿದೆ. ರಾಜಸ್ಥಾನ ರಾಜ್ಯದಲ್ಲಿ ಎಕ್ಸಿಟ್ ಪೋಲ್ ಅಂದಾಜಿನ ಪ್ರಕಾರವೇ ಬಿಜೆಪಿ ಗೆಲುವು ಪಡೆಯುತ್ತಿದೆ. ಮೊನ್ನೆ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಗೆಲುವನ್ನು ಸೂಚಿಸುತ್ತಿರುವಂತೆಯೇ ಬಿಜೆಪಿಯಲ್ಲಿ ಮುಂದಿನ ಸಿಎಂ ಯಾರು ಎಂಬ ಸುದ್ದಿಗಳು ಹುಟ್ಟಿಕೊಂಡಿದೆ.

ಬಿಜೆಪಿಯಲ್ಲಿ ಸಿಎಂ ಸಾಧ್ಯತೆ ಇರುವ ಹಲವು ಪ್ರಮುಖ ನಾಯಕರ ಹೆಸರು ಕೇಳಿಬಂದಿವೆ. ಅದರಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಸಿಂದ್ಯ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಇದರ ಜೊತೆಗೆ ಆಲ್ವಾರ್​ನ ಸಂಸದ ಹಾಗೂ ಮಹಂತ್ ಬಾಲಕನಾಥ್ ಹೆಸರು ಕೂಡ ಪ್ರಧಾನವಾಗಿ ಕೇಳಿಬರುತ್ತಿದೆ.

ವಸುಂಧರಾ ರಾಜೆ ಮತ್ತು ಮಹಂತ್ ಬಾಲಕನಾಥ್ ಜೊತೆಗೆ ರಾಜಕುಮಾರಿ ಹಾಗೂ ರಾಜಸಮಂದ್ ಕ್ಷೇತ್ರದ ಸಂಸದೆ ದಿಯಾ ಕುಮಾರಿ, ಕೇಂದ್ರ ಸಚಿವರಾದ ಭೂಪೇಂದರ್ ಯಾದವ್ ಮತ್ತು ಅಶ್ವಿನಿ ವೈಷ್ಣವ್ ಹಾಗು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೆಸರುಗಳು ಸಿಎಂ ಸ್ಥಾನಕ್ಕೆ ಕೇಳಿಬರುತ್ತಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!