Mysore
20
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಹರಿಪ್ರಿಯಾ ವಸಿಷ್ಠ ಸಿಂಹ ನಿಶ್ಚಿತಾರ್ಥಕ್ಕೆ ವರ್ಷ : ಸಿಂಹಪ್ರಿಯಾ ಸಂಭ್ರಮ

ಸ್ಯಾಂಡಲ್ವುಡ್‌ ನ ಸ್ವೀಟ್‌ ಕಪಲ್‌ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥ ಮಾಡಿಕೊಂಡು ಇಂದಿಗೆ ಒಂದು ವರ್ಷ ಕಳೆದಿದೆ. ಈ ಖುಷಿಯ ವಿಚಾರವನ್ನು ನಟಿ ಹರಿಪ್ರಿಯ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು, oh!! an year already since we got officiallly engaged. cheers to us for coping up with each other’s madness ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 2 ರಂದು ಈ ಜೋಡಿ ಸದ್ದಿಲ್ಲದೇ ಕೇವಲ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ ಜನವರಿ 26 ರಂದು ಈ ಕ್ಯೂಟ್‌ ಕಪಲ್‌ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಬಹಳಾ ಸರಳವಾಗಿ ಹಾಗೂ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿತ್ತು.

ಈ ಸ್ಟಾರ್‌ ಕಪಲ್‌ ಗೆ ಸ್ಯಾಂಡಲ್ವುಡ್‌ ನ ನಟ ನಟಿಯರಾದ ಡಾಲಿ ಧನಂಜಯ್‌, ಅಮೃತಾ ಅಯ್ಯಂಗಾರ್‌, ಶಿವರಾಜ್‌ ಕುಮಾರ್‌ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಹ ಆಗಮಿಸಿ ಶುಭಕೋರಿದ್ದರು.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಕೂಡ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೂ ಕೂಡ ಈ ಜೋಡಿ ತಮ್ಮ ಪ್ರೀತಿಯ ವಿಚಾರವನ್ನೂ ಎಲ್ಲಿಯೂ ಕೂಡ ಬಿಟ್ಟುಕೊಟ್ಟಿರಲಿಲ್ಲ.

ತಮ್ಮ ಪ್ರೀತಿಗೆ ಹಿರಿಯರ ಸಮ್ಮತಿ ಸಿಕ್ಕ ನಂತರ ಈ ಜೋಡಿ ಗುಟ್ಟಾಗಿಯೇ ಮದುವೆ ತಯಾರಿಯಲ್ಲಿ ಬ್ಯೂಸಿಯಾಗಿತ್ತು.

ನಟಿ ಹರಿ ಪ್ರಿಯಾ ಅವರು ಮೂಗು ಚುಚ್ಚಿಸುವ ವೇಳೆ ಯಾರೋ ಅವರನ್ನು ಅಪ್ಪಿಕೊಂಡು ಸಂತೈಸುತ್ತಿದ್ದರು. ಅದು ವಸಿಷ್ಠ ಸಿಂಹ ಇರಬರುದು ಎಂದು ಅಭಿಮಾನಿಗಳು ಗೆಸ್‌ ಮಾಡಿದ್ದರು. ಇದಾದ ನಂತರ ಈ ಜೋಡಿ ದುಬೈ ಪ್ರವಾಸಕ್ಕೆ ಹಾರಿತ್ತು. ಈ ಮೂಲಕ ಇವರಿಬ್ಬರು ಸತಿಪತಿಗಳಾಗುತ್ತಾರೆ ಎಂಬ ಸುದ್ದಿ ದಟ್ಟವಾಗಿ ಹರಿದಾಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!