ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ತೆಲುಗು ಚಿತ್ರ ಸಲಾರ್‌ನ ಟ್ರೈಲರ್ ಇಂದು ( ಡಿಸೆಂಬರ್ 1 ) ಬಿಡುಗಡೆಯಾಗಿದೆ. 3 ನಿಮಿಷ 47 ಸೆಕೆಂಡ್‌ಗಳ ಟ್ರೈಲರ್ ಇದಾಗಿದ್ದು, ಟ್ರೈಲರ್ ಉದ್ದಕ್ಕೂ ಮಾಸ್ ಎಲಿಮೆಂಟ್ ತುಂಬಿ ತುಳುಕುತ್ತಿವೆ.
ಕೆಜಿಎಫ್ ಮಾದರಿಯಲ್ಲಿಯೇ ಸೆಟ್, ಎಡಿಟಿಂಗ್, ಕ್ಯಾಮೆರಾ ವರ್ಕ್, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಎಲ್ಲವೂ ಇದ್ದು ಪ್ರಶಾಂತ್ ನೀಲ್ ಮತ್ತೊಮ್ಮೆ ಸಿಕ್ಸರ್ ಬಾರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟ್ರೈಲರ್ ನೋಡಿದ ಸಿನಿ ರಸಿಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸಲಾರ್ ಕನ್ನಡದಲ್ಲಿ ಪ್ರಶಾಂತ್ ನೀಲ್ ನಿರ್ದೇಶಿಸಿದ್ದ ಮೊದಲ ಚಿತ್ರ ಉಗ್ರಂನ ರಿಮೇಕ್ ಎಂದು ಚಿತ್ರ ಸೆಟ್ಟೇರಿದಾಗಿನಿಂದಲೂ ಸುದ್ದಿಗಳು ಹರಿದಾಡಿದ್ದವು. ಆದರೆ ಟ್ರೈಲರ್‌ನಲ್ಲಿನ ದೃಶ್ಯಗಳಿಗೂ ಉಗ್ರಂಗೂ ಹೆಚ್ಚೇನೂ ನಂಟಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಸಿಗುತ್ತಿದೆಯಾದರೂ ಟ್ರೈಲರ್‌ನ ಮೊದಲ ದೃಶ್ಯದಲ್ಲಿ ಬಾಲ್ಯದಲ್ಲಿ ನಾಯಕ ತನ್ನ ಸ್ನೇಹಿತನಿಗೆ ನಿನಗೆ ನನ್ನ ಅಗತ್ಯವಿದ್ದಾಗ ಹೇಳು ನಾನು ಬರುತ್ತೇನೆ ಎಂದು ಹೇಳುವ ಡೈಲಾಗ್ ಮತ್ತು ಕೊನೆಯಲ್ಲಿ ಬರುವ ಸಾಹಸದೃಶ್ಯ ಒಂದು ಕ್ಷಣ ಉಗ್ರಂ ಸಿನಿಮಾವನ್ನು ನೆನಪಿಸಿದ್ದು ಸುಳ್ಳಲ್ಲ. ಹೀಗಾಗಿ ಸಲಾರ್ ಚಿತ್ರ ಉಗ್ರಂನ ರಿಮೇಕ್ ಎಂಬ ಅನುಮಾನ ಮತ್ತಷ್ಟು ಹೆಚ್ಚಾಗಿದೆ.