Mysore
27
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಮಧ್ಯಪ್ರದೇಶ ಚುನಾವಣಾ ಎಕ್ಸಿಟ್‌ಪೋಲ್‌ ಪ್ರಕಟ: ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ

ಭೋಪಾಲ್‌ : ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇರಲಿದೆ ಎಂದು ಎಕ್ಸಿಟ್‌ಪೋಲ್‌ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ.

2005 ರಿಂದ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಐದನೇ ಅವಧಿಗೆ ಅಧಿಕಾರದ ನಿರೀಕ್ಷೆಯಲ್ಲಿದ್ದಾರೆ. ಇತ್ತ ಕಮಲ್‌ ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಚಿಸಲು ಕಾಯುತ್ತಿದೆ. ಡಿಸೆಂಬರ್‌ 3 ರಂದು ನಡೆಯುವ ಮತ ಎಣಿಕೆ ನಂತರ ಫಲಿತಾಂಶ ಪ್ರಕಟವಾಗಲಿದ್ದು, ಮತದಾನ ಪ್ರಭು ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಕಾದುನೊಡಬೇಕಿದೆ. ನವೆಂಬರ್‌ 17 ರಂದು ಮತದಾನ ನಡೆದಿತ್ತು.

ರಾಜ್ಯದಲ್ಲಿ 230 ಸ್ಥಾನಗಳಿದ್ದು ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದೆ.

ವಿವಿಧ ಸಮೀಕ್ಷಾ ಸಂಸ್ಥೆಗಳು ನೀಡಿರುವ ಫಲಿತಾಂಶ ಇಲ್ಲಿದೆ.̇̇

*ರಿಪಬ್ಲಿಕ್ ಟಿವಿ-ಮ್ಯಾಟ್ರಿಜನ್ ಸಮೀಕ್ಷೆಯ ಪ್ರಕಾರ ಬಿಜೆಪಿ 118-130, ಕಾಂಗ್ರೆಸ್ 97-107 ಇತರೆ 0-2
*ಟಿವಿ 9 ಭಾರತ್ ವರ್ಷ-ಪೋಲ್ಸ್ ಟ್ರಾಟ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 111-121, ಬಿಜೆಪಿ 106-116, ಇತರೆ 0-6
*ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 102-125, ಬಿಜೆಪಿ 100-123, ಇತರೆ 5
*ಶೈನಿಂಗ್‌ ಇಂಡಿಯಾ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 126, ಬಿಜೆಪಿ 98, ಇತರೆ 06
*ದೈನಿಕ್‌ ಬಾಸ್ಕರ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 105-120, ಬಿಜೆಪಿ 95-115, ಇತರೆ 0-15
*ಡೆಮಾಕ್ರಸಿ ಟೈಮ್ಸ್‌ ನೆಟ್‌ವರ್ಕ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 114, ಬಿಜೆಪಿ 111, ಇತರೆ 5
*ನ್ಯೂಸ್‌ 24 ಟುಡೇʼಸ್‌ ಚಾಣಕ್ಯ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 75, ಬಿಜೆಪಿ 151, ಇತರೆ 5 ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆಗಳು ತಿಳಿಸಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!