Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ರಾಜಸ್ಥಾನ್‌ ವಿಧಾನಸಭೆ ಎಕ್ಸಿಟ್‌ ಪೋಲ್‌ ಪ್ರಕಟ; ಯಾರಿಗೆ ಜಯ, ಏನು ಹೇಳುತ್ತಿವೆ ಸಮೀಕ್ಷೆಗಳು?

ನವೆಂಬರ್‌ 25ರ ಶನಿವಾರ ರಾಜಸ್ಥಾನ ವಿಧಾನಸಭೆಯ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಶೇ 75.45 ಮತದಾನ ನಡೆದಿದ್ದು ಮತದಾರರು 1892 ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆ ಒಳಗೆ ಇರಿಸಿದ್ದಾರೆ. ಇನ್ನು ಫಲಿತಾಂಶ ಡಿಸೆಂಬರ್‌ 3ರಂದು ಹೊರಬೀಳಲಿದ್ದು ಇಂದು ( ನವೆಂಬರ್‌ 30 ) ವಿವಿಧ ಮಾಧ್ಯಮ ಏಜೆನ್ಸಿಗಳು ಎಕ್ಸಿಟ್‌ ಪೋಲ್‌ಗಳನ್ನು ಘೋಷಿಸಿವೆ.

ಕಳೆದ ಬಾರಿ 99 ಸ್ಥಾನಗಳನ್ನು ಗೆದ್ದು ಇನ್ನೊಂದು ಸ್ಥಾನದ ಬೆಂಬಲವನ್ನು ಬಹುಜನ ಸಮಾಜವಾದಿ ಪಕ್ಷದಿಂದ ಪಡೆದುಕೊಂಡು ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್‌ ಈ ಬಾರಿಯೂ ಗೆಲುವಿನ ಲೆಕ್ಕಾಚಾರದಲ್ಲಿದ್ದರೆ, ಸೋಲನ್ನು ಅನುಭವಿಸಿದ್ದ ಬಿಜೆಪಿ ಬಹುಮತ ಪಡೆಯುವ ನಿರೀಕ್ಷೆಯಲ್ಲಿದೆ. ಹಾಗಿದ್ದರೆ ಯಾವ ಎಕ್ಸಿಟ್‌ ಪೋಲ್‌ ಪ್ರಕಾರ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

* ಸಟ್ಟಾ ಬಜಾರ್‌ ಬಿಜೆಪಿ 115 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್‌ 68 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದೆ.
* ಸಿಎನ್‌ಎನ್‌ – ನ್ಯೂಸ್‌ 18 ಎಕ್ಸಿಟ್‌ ಪೋಲ್‌ ಪ್ರಕಾರ ಬಿಜೆಪಿ 111 ಸ್ಥಾನ, ಕಾಂಗ್ರೆಸ್‌ 74 ಸ್ಥಾನ, ಇತರೆ 14 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
* ಜನ್‌ ಕಿ ಬಾತ್‌ ವರದಿ ಪ್ರಕಾರ ಬಿಜೆಪಿ 100 ರಿಂದ 122 ಸ್ಥಾನ, ಕಾಂಗ್ರೆಸ್‌ 62 ರಿಂದ 85 ಹಾಗೂ ಇತರೆ 14 ರಿಂದ 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿದು ಬಂದಿದೆ.
* ಟಿವಿ9 ಭಾರತ್‌ವರ್ಷ್‌ ಪೋಲ್‌ಸ್ಟ್ರಾಟ್‌ ಎಕ್ಸಿಟ್‌ ಪೋಲ್‌ ಬಿಜೆಪಿ 100 ರಿಂದ 110 ಸ್ಥಾನಗಳಲ್ಲಿ ಗೆದ್ದರೆ ಕಾಂಗ್ರೆಸ್‌ 90ರಿಂದ 100 ಹಾಗೂ ಇತರೆ 5ರಿಂದ 15 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.
* ಟೈಮ್ಸ್‌ ನೌ ಇಟಿಜಿ ಬಿಜೆಪಿ 110ರಿಂದ 128 ಸ್ಥಾನ, ಕಾಂಗ್ರೆಸ್‌ 56-72 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.

* ಏಕ್ಸಿಸ್‌ ಮೈ ಇಂಡಿಯಾ ಟುಡೇ ಎಕ್ಸಿಟ್‌ ಪೋಲ್‌ ಕಾಂಗ್ರೆಸ್‌ 86 ರಿಂದ 106 ಸ್ಥಾನಗಳಲ್ಲಿ ಗೆಲ್ಲಲಿದ್ದರೆ, ಬಿಜೆಪಿ 80ರಿಂದ 100 ಸ್ಥಾನಗಳಲ್ಲಿ ಗೆಲ್ಲಲಿದೆ, ಇತರೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು 9ರಿಂದ 18 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ತಿಳಿಸಿದೆ.

* ಸಿ ವೋಟರ್‌ ಪ್ರಕಾರ ಕಾಂಗ್ರೆಸ್‌ 127 ರಿಂದ 135, ಬಿಜೆಪಿ 87 ರಿಂದ 105 ಹಾಗೂ ಇತರರು 5ರಿಂದ 15 ಸೀಟ್‌ ಗೆಲ್ಲಬಹುದು ಎಂದು ವರದಿ ಮಾಡಲಾಗಿದೆ.

* ಸಿಎನ್‌ಎಕ್ಸ್‌ ಸಮೀಕ್ಷೆ ಪ್ರಕಾರ ಬಿಜೆಪಿ 80ರಿಂದ 90, ಕಾಂಗ್ರೆಸ್‌ 94ರಿಂದ 104 ಹಾಗೂ ಇತರೆ ಪಕ್ಷಗಳು 14ರಿಂದ 18 ಸ್ಥಾನಗಳಲ್ಲಿ ಗೆಲ್ಲಲಿವೆ.
* ಮೆಟ್ರೈಜ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 125 ರಿಂದ 135, ಬಿಜೆಪಿ 87 ರಿಂದ 107 ಹಾಗೂ ಇತರೆ ಪಕ್ಷಗಳು 8 ರಿಂದ 105 ಸ್ಥಾನಗಳಲ್ಲಿ ಗೆಲ್ಲಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ