Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

NZ vs BAN ಟೆಸ್ಟ್‌: 29ನೇ ಟೆಸ್ಟ್‌ ಶತಕ ದಾಖಲಿಸಿದ ಕೇನ್‌ ವಿಲಿಯಮ್ಸ್‌

ಸಿಲ್ಹೆಟ್‌ : ನ್ಯೂಜಿಲೆಂಡ್ ತಂಡ ಎರಡು ಟೆಸ್ಟ್‌ ಪಂದ್ಯಗಳು ಆಡಲು ಬಾಂಗ್ಲಾದೇಶ ಪ್ರವಾಸ ಕೈಗೊಂಡಿದೆ. ಇಲ್ಲಿನ ಸೈಲ್ಹಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊಲದ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ಗೆ ಆಸರೆಯಾಗಿ ನಿಂತ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ ತಮ್ಮ ಟೆಸ್ಟ್‌ ವೃತ್ತಿಬದುಕಿನ 29ನೇ ಶತಕ ಬಾರಿಸಿದ್ದಾರೆ. ಜೊತೆಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರು, ಮತ್ತೊಂದೆಡೆ ಕ್ರೀಸ್‌ನಲ್ಲಿ ಸುಭದ್ರವಾಗಿ ನೆಲೆನಿಂತ ಕೇನ್‌ ವಿಲಿಯಮ್ಸನ್‌ ಮನಮೋಹಕ ಶತಕ ಬಾರಿಸಿದರು. 205 ಎಸೆತಗಳಲ್ಲಿ 104 ರನ್‌ ಬಾರಿಸಿದ ಬಲಗೈ ಬ್ಯಾಟರ್ ತಮ್ಮ 42ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದರು. ಹಾಲಿ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.

ಹಾಲಿ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿರುವ ಬ್ಯಾಟರ್ಸ್‌
01) ವಿರಾಟ್‌ ಕೊಹ್ಲಿ (ಭಾರತ) – 80
02) ಡೇವಿಡ್‌ ವಾರ್ನರ್‌ (ಆಸ್ಟ್ರೇಲಿಯಾ) – 48
03) ಜೋ ರೂಟ್‌ (ಇಂಗ್ಲೆಂಡ್‌) – 46
04) ರೋಹಿತ್‌ ಶರ್ಮಾ (ಭಾರತ) – 45
05) ಸ್ಟೀವ್ ಸ್ಮಿತ್‌ (ಆಸ್ಟ್ರೇಲಿಯಾ) – 44
06) ಕೇನ್‌ ವಿಲಿಯಮ್ಸನ್‌ (ನ್ಯೂಜಿಲೆಂಡ್) – 42

ಬಾಂಗ್ಲಾದೇಶ / ನ್ಯೂಜಿಲ್ಯಾಂಡ್‌ ತಂಡದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದ ಬಾಂಗ್ಲಾ, ಮೊಲದ ಇನಿಂಗ್ಸ್‌ನಲ್ಲಿ 85.1 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 310 ರನ್‌ ಕಲೆಹಾಕಿದರು. ಬಾಂಗ್ಲಾ ಪರವಾಗಿ ಹಸನ್‌ ಜಾಯ್‌ 86 ರನ್‌ ಗಳಿಸಿದರು. ನ್ಯೂಜಿಲೆಂಡ್‌ ಪರವಾಗಿ ಗ್ಲೆನ್‌ ಫಿಲಿಪ್ಸ್‌ 53/4, ಕೈಲ್‌ ಜೇಮಿಸನ್‌ಮ ಎಜಾಯ್‌ ಪಟೇಲ್‌ ತಲಾ 2 ವಿಕೆಟ್‌ ಪಡೆದರು.

ಎರಡನೇ ದಿನ ನ್ಯೂಜಿಲ್ಯಾಂಡ್‌ ತನ್ನ ಮೊದಲ ಇನ್ನಿಂಗ್ಸ್‌ ಆರಂಭಿಸಿದರು. ತಂಡದ ವಿಕೆಟ್‌ಗಳು ಒಂದೆಡೆ ಬೀಳುತ್ತಿದ್ದರೂ ಮತ್ತೊಂದೆಡೆ ಶತಕದಾಟ ಆಡಿ ತಂಡವನ್ನು ಸುಧಾರಿಸಿದ ಕೇನ್‌, 205 ಎಸೆತಗಳಲ್ಲಿ 11 ಫೋರ್‌ಗಳೊಂದಿಗೆ 104 ರನ್‌ ಬಾರಿಸಿ ಔಟಾದರು.

ಡ್ಯಾರಿಲ್ ಮಿಚೆಲ್‌ 41 ಮತ್ತು ಗ್ಲೆನ್‌ ಫಿಲಿಪ್ಸ್‌ 42 ದೊಡ್ಡ ಇನ್ನಿಂಗ್ಸ್‌ ನೀಡಿದರು, ಆದರೆ ವಿಫಲರಾದರು. ಆಲ್‌ರೌಂಡರ್‌ ಕೈಲ್‌ ಜೇಮಿಸನ್‌ 7 ಮತ್ತು ಟಿಮ್‌ ಸೌಥೀ 1 ಕ್ರೀಸ್‌ನಲ್ಲಿದ್ದು, ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ 44 ರನ್‌ಗಳ ಹಿನ್ನೆಡೆ ಅನುಭವಿಸಿದೆ.

ನಾಳೆ ಮೊದಲ ಟೆಸ್ಟ್‌ನ ಮೂರನೇ ದಿನಕ್ಕೆ ಆಟ ಕಾಯ್ದಿರಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ