ಮೈಸೂರು: ಜಾತಿ ನಿಂದನೆ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವುದಾಗಿ ಪಿಹೆಚ್‌ಡಿ ವಿದ್ಯಾರ್ಥಿನಿ ಒಬ್ಬರು ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೈಕ್ರೋ ಬಯೋಲಜಿ ವಿಬಾಗದ ಪ್ರೊ.ಶುಭ ಗೋಪಾಲ್ ವಿರುದ್ಧ ವಿದ್ಯಾರ್ಥಿನಿ ದೂರು ದಾಖಲು ಮಾಡಿದ್ದಾರೆ. ಫೆಲೊಶಿಪ್ ಬಿಲ್‌ಗೆ ಸಹಿ ಹಾಕಲು ನನ್ನ ಬಳಿ ಉಡುಗೊರೆಗಳನ್ನು ತರೆಸಿಕೊಳ್ಳುತ್ತಿದ್ದರು. ಐಶಾರಾಮಿ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ನನ್ನ ಬಳಿಯೇ ಬಿಲ್ ಪಾವತಿ ಮಾಡಿಸುತ್ತಿದ್ದರು. ಅಷ್ಟೇ ಅಲ್ಲದೇ ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ.
ಈ ಬಗ್ಗೆ ಈಗಾಗಲೇ ವಿವಿ ಕುಲಪತಿ ಮತ್ತು ಕುಲಸಚಿವರಿಎ ದೂರು ನೀಡಿದ್ದೇನೆ. ಆದರೆ ಅದಕ್ಕೆ ಪ್ರತಿಯಾಗಿ, ದೂರನ್ನು ವಾಪಸ್ ತೆಗೆದುಕೊಂಡು, ಮಾರ್ಗದರ್ಶಕರನ್ನು ಬದಲಾಯಿಸಿಕೊಳ್ಳಿ ಅಂತಾ ಒತ್ತಡ ಹೇರಲಾಗುತ್ತಿದೆ ಅಂತಾ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ.