Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಉತ್ತರಕಾಶಿ ಸುರಂಗ ಕುಸಿತ: ಪೈಪ್‌ ಅಳವಡಿಕೆ ಕಾರ್ಯ ಸಕ್ಸಸ್;‌ ಕಾರ್ಮಿಕರ ರಕ್ಷಣೆ ಹೇಗೆ ನಡೆಯಲಿದೆ?

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಿಂದಾಗಿ ಕೆಲಸ ನಿರ್ವಹಿಸುತ್ತಿದ್ದ 41 ಕಾರ್ಮಿಕರು ಸಿಲುಕಿಹಾಕಿಕೊಂಡಿದ್ದರು. ನವೆಂಬರ್‌ 12ರಂದು ಸುರಂಗ ಕುಸಿತ ಸಂಭವಿಸಿದ್ದು, ಬರೋಬ್ಬರಿ 16 ದಿನಗಳ ಸತತ ಕಾರ್ಯಾಚರಣೆಯ ಬಳಿಕ ಕಾರ್ಮಿಕರು ಸಿಲುಕಿದ್ದ ಸಮೀಪಕ್ಕೆ ರಕ್ಷಣಾ ಸಿಬ್ಬಂದಿ ತಲುಪಿದ್ದಾರೆ.

ಕಾರ್ಮಿಕರು ಇರುವ ಸನಿಹದವರೆಗೂ ಪೈಪ್‌ ಅಳವಡಿಕೆ ಕಾರ್ಯ ಸದ್ಯ ಯಶಸ್ವಿಯಾಗಿದ್ದು ಇಂದು ಮಧ್ಯರಾತ್ರಿಯೊಳಗೆ ಎಲ್ಲಾ 41 ಕಾರ್ಮಿಕರನ್ನು ಹೊರ ಕರೆತರಲಾಗಲಿದೆ. ಸಿಲುಕಿರುವ ಕಾರ್ಮಿಕರನ್ನು ಹಗ್ಗಕ್ಕೆ ಸ್ಟ್ರೆಚರ್‌ ಕಟ್ಟಿ ಅಳವಡಿಸಿರುವ ಪೈಪ್‌ ಮುಖಾಂತರ ಹೊರತೆಗೆಯುವ ಯೋಜನೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೆಣೆದಿದೆ.

ಇನ್ನು ಈ ಯೋಜನೆ ಮೂಲಕ ಓರ್ವ ಕಾರ್ಮಿಕನನ್ನು ಆಚೆ ತೆಗೆಯಲು ಸುಮಾರು 5 ನಿಮಿಷಗಳ ಸಮಯ ಬೇಕಾಗಿದ್ದು, ಒಬ್ಬೊಬ್ಬರನ್ನಾಗಿ ಎಲ್ಲಾ 41 ಕಾರ್ಮಿಕರನ್ನು ಹೊರತೆಗೆಯಲು 3 ಗಂಟೆ 45 ನಿಮಿಷಗಳು ಬೇಕಾಗಲಿದೆ. ಇನ್ನು ಹೊರತೆಗೆದ ಕಾರ್ಮಿಕರನ್ನು ತಕ್ಷಣವೇ ಆಮ್ಲಜನಕ ಸೌಲಭ್ಯವುಳ್ಳ ಆಂಬುಲೆನ್ಸ್‌ ಮೂಲಕ 30 ಕಿಲೋಮೀಟರ್‌ ದೂರದಲ್ಲಿರುವ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಕೇಂದ್ರಕ್ಕೆ ಸಾಗಿಸಲಾಗಲಿದ್ದು ಅಲ್ಲಿ ಎಲ್ಲಾ ಕಾರ್ಮಿಕರಿಗೂ ಆಮ್ಲಜನಕ ಬೆಂಬಲಿತ ಬೆಡ್‌ಗಳುಳ್ಳ ಪ್ರತ್ಯೇಕ ವಾರ್ಡ್‌ಗಳ ಸೌಲಭ್ಯವನ್ನು ಕಲ್ಪಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ