Mysore
26
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಆಲಿಯಾ ಭಟ್‌ಗೂ ತಟ್ಟಿದ ಡೀಪ್‌ ಫೇಕ್‌ ಬಿಸಿ

ಇತ್ತೀಚೆಗೆ ಡೀಪ್‌ ಫೇಕ್‌ ತಂತ್ರಜ್ಙಾನದ ಹಾವಳಿ ಹೆಚ್ಚಾಗಿದೆ. ಕೆಲದಿನಗಳ ನಟಿ ರಶ್ಮಿಕಾ ಮಂದಣ್ಣ, ಕಾಜೊಲ್‌, ಅವರ ಡೀಪ್‌ ಫೇಕ್ ವಿಡಿಯೋ ಸಖತ್‌ ವೈರಲ್‌ ಆಗಿ ಸಂಚಲನ ಸೃಷ್ಟಿಸಿತ್ತು. ಇದೀಗ ನಟಿ ಆಲಿಯಾ ಭಟ್‌ ಅವರಿಗೂ ಕೂಡ ಡೀಪ್‌ ಫೇಕ್‌ ಸಂಕಷ್ಟ ಎದುರಾಗಿದೆ.

ಅರೆಬರೆ ಬಟ್ಟೆ ಧರಿಸಿರುವ ಯುವತಿಯ ದೇಹಕ್ಕೆ ಡೀಪ್‌ ಫೇಕ್‌ ತಂತ್ರಜ್ಙಾನ ಬಳಸಿ ನಟಿ ಆಲಿಯಾ ಭಟ್‌ ಅವರ ಮುಖವನ್ನು ಅಂಟಿಸಿ ವೈರಲ್‌ ಮಾಡಲಾಗಿದೆ.

ಡೀಪ್‌ ಫೇಕ್‌ ವಿಡಿಯೋಗಳು ವೈರಲ್‌ ಆಗುತ್ತಿದ್ದಂತೆ ಸೈಬರ್‌ ಕ್ರೈಂ ತಂಡ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ಡೀಪ್‌ ಫೇಕ್‌ ಹಾವಳಿ ನಿಂತಿಲ್ಲ.

ಕೆಲ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ತುಂಡುಡುಗೆ ಧರಿಸಿ ಲಿಫ್ಟ್‌ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಅಸಲಿಗೆ ಜರಾ ಪಟೇಲ್‌ ಎಂಬ ಯುವತಿಯ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್‌ ಫೇಕ್‌ ತಂತ್ರಜ್ಞಾನ ಬಳಸಿ ಮಾರ್ಪ್‌ ಮಾಡಲಾಗಿತ್ತು. ಈ ಕುರಿತು ಪತ್ರಕರ್ತ ಅಮಿತ್‌ ಫ್ಯಾಕ್ಟ್‌ ಚೆಕ್‌ ಮಾಡಿ ಇದು ಡೀಪ್‌ ಫೇಕ್‌ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದರು.

ಇದೇ ರೀತಿ ಯುವತ್ತಿಯೊಬ್ಬರು ಬಟ್ಟೆ ಬದಲಿಸುತ್ತಿರುವ ವಿಡಿಯೋವೊಂದಕ್ಕೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಬಿ ಟೌನ್ ನ ಕೃಷ್ಣ ಸುಂದರಿ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು.

ಅಸಲಿಗೆ ಈ ವಿಡಿಯೋವನ್ನು ಜೂನ್ 5 ರಂದು ಟಿಕ್ ಟಾಕ್ ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು, ಗೆಟ್ ರೆಡಿ ವಿತ್ ಮಿ ಟ್ರೆಂಡ್ ಅಡಿಯಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವ ಯುವತಿಯ ಮುಖಕ್ಕೆ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಪ್ಯಾಕ್ಟ್ ಚೆಕ್ ಮಾಡುವ ಬೂಮ್ ವರದಿ ಮಾಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ