Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ : ಯಾರಿದು ಹೊಸ ಅಭ್ಯರ್ಥಿ ?

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 10 ಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಇಬ್ಬರು ಹೊಸ ಅಭ್ಯರ್ಥಿಗಳು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯು ಪ್ರೋಮೋವೊಂದನ್ನು ರಿಲೀಜ್‌ ಮಾಡಿದ್ದು, ದೊಡ್ಮನೆಯೊಳಗೆ ಕಾಲಿಟ್ಟವರು ಯಾರು ಎಂಬ ಕುತೂಹಲ ಮೂಡಿಸಿದೆ.

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ ಬಾಸ್‌ ಮನೆಯೊಳಗೆ ಪವಿತ್ರ ಪೂವಪ್ಪ ಹಾಗೂ ಅಸ್ತಿಕ್‌ ಅವಿನಾಶ್‌ ಶೆಟ್ಟಿ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾದ ಅಭ್ಯರ್ಥಿಗಳ ಮೂಕವನ್ನು ರಿವೀಲ್‌ ಮಾಡಿಲ್ಲ. ಹಾಗಾಗಿ ಬಿಗ್‌ ಬಾಸ್‌ ಮನೆಯೋಳಗೆ ಬಂದಿರುವ ಹೊಸ ಅಭ್ಯರ್ಥಿಗಳು ಯಾರು ಎನ್ನುವ ಕುತೂಹಲ ಮೂಡಿದೆ.

ಆದರೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮನೆಯೊಳಗೆ ಬಂದಿರುವ ಇಬ್ಬರು ಅಬ್ಯರ್ಥಿಗಳ ಪೈಕಿ ಪವಿತ್ರ ಪೂವಪ್ಪ ಅವರು ಮಾಡೆಲ್‌ ಆಗಿದ್ದು, ಹಲವಾರು ಶೋಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಸಖತ್‌ ಬೋಲ್ಡ್‌ ಆಗಿ ಫೋಟೊಶೂಟ್‌ ಮಾಡಿಸಿ ಮಿಂಚಿದ್ದಾರೆ. ಇದೀಗ ಅಷ್ಟೇ ಬೋಲ್ಡ್‌ ಆಗಿ ಕೆಂಪು ಬಣ್ಣದ ಕಾರಿನಲ್ಲಿ ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗಿದ್ದು, ದೊಡ್ಮನೆಯಲ್ಲಿ ಪವಿತ್ರ ಅವರ ಆಟ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನೂ ಮನೆಯೊಳಗೆ ಬಂದಿರುವ ಮತ್ತೊಬ್ಬ ಅಭ್ಯರ್ಥಿ ಅಸ್ತಿಕ್‌ ಅವಿನಾಶ್‌ ಶೆಟ್ಟಿಯವರು ಒಬ್ಬ ನಟನಾಗಿದ್ದು ಶ್ರೀಮಂತ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನು ಮನೆಯೊಳಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗುತ್ತಿದ್ದಂತೆ ಮನೆಯೊಳಗಿದ್ದ ಸ್ಪರ್ದಿಗಳಿಗೆ ಚಿಂತೆ ಶುರುವಾದಂತಿದೆ. ಕಲರ್ಸ್‌ ಕನ್ನಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಪವಿತ್ರ ಅವರು ಈ ಶಾಕ್‌ ಬೇಕು. ಅವರಿಗೆ ಬೆವರು ಇಳಿಸೋಣ ಎಂದಿದ್ದಾರೆ. ಇನ್ನು ವಿನಯ್‌ ಕಾರ್ತಿಕ್‌ ಬಳಿ ವೈಲ್ಡ್‌ ಕಾರ್ಡ್‌ ಎಂಟ್ರಿ ಆದರೆ ಹಾಟ್‌ ಸೀಟ್‌ ಗಳಾಗುತ್ತವೆ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ