Mysore
19
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಅಂಬೇಡ್ಕರ್‌ ಅವರ ಆಶಯವನ್ನು ಮೋದಿಜೀ ನೆರವೇರಿಸುತ್ತಿದ್ದಾರೆ: ಬಿವೈ ವಿಜಯೇಂದ್ರ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಮತ ಬ್ಯಾಂಕ್‌ ರಾಜಕಾರಣವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬಾಬಾ ಸಾಹೇಬರ ಆಶಯವನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಇಂದು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಎಸ್‌ಸಿ ಮೋರ್ಚಾ ವತಿಯಿಂದ ಆಯೋಜಿಸಲಾಗಿದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನೆಹರೂ ಸ್ಮಾರಕಕ್ಕೆ ೩೦ ಎಕರೆ, ಇಂದಿರಾ ಗಾಂಧಿ ಸ್ಮಾರಕಕ್ಕೆ ೨೦ ಎಕರೆ ಜಾಗ ನೀಡಿದ ಕಾಂಗ್ರೆಸ್‌ ಸರ್ಕಾರ ಅಂಬೇಡ್ಕರ್‌ ಅವರ ಹೆಸರನ್ನು ನುಡಿ ಮುತ್ತಾಗಿ ಬಳಸುವ ಅವರು, ಗೌರವಯುತವಾಗಿ ಅಂಬೇಡ್ಕರ್‌ ಅವರ ಅಂತ್ಯ ಸಂಸ್ಕಾರವನ್ನು ಮಾಡಲು ಬಿಡಲಿಲ್ಲ. ಅಂತಹ ಪಕ್ಷಕ್ಕೆ ಅಂಬೇಡ್ಕರ್‌ ಹೆಸರು ಹೇಳುವ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.

ನೆಹರು, ಇಂದಿರಾ ಗಾಂಧಿ ಅವರ ರಾಷ್ಟ್ರೀಯ ಸ್ಮಾರಕಕ್ಕೆ ಜಾಗ ನೀಡಿದ ಕಾಂಗ್ರೆಸ್‌ ಬಾಬಾ ಸಾಹೇಬರಿಗೆ ಯಾಕೆ ನೀಡಲಿಲ್ಲ. ಅಂದು ಅವರಿಗೆ ಅಂಬೇಡ್ಕರ್‌ ನೆನಪಾಗಲಿಲ್ಲವೇ, ಮೊದಿ ಅವರು ಅಧಿಕಾರಕ್ಕೆ ಬಂದು ಬಾಬಾ ಸಾಹೇಬರ್‌ ಸ್ಮಾರಕ ಘೋಷಿಸಿ ಉದ್ಘಾಟನೆ ಮಾಡಿದೆ. ಆದರೆ ಕಾಂಗ್ರೆಸ್‌ ನೆಹರು ಕುಟುಂಬದ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ಕೊಡುವ ಕಡೆ ಗಮನ ನೀಡಿದೆ. ಇಂತಹವರಿಂದ ಬಿಜೆಪಿ ಪಕ್ಷ ಅಂಬೇಡ್ಕರರ ಬಗ್ಗೆ ತಿಳಿದುಕೊಳ್ಳಬೇಕಿಲ್ಲ ಎಂದು ಕಿಡಿಕಾರಿದರು.

ದೇಶದ ಸಂವಿಧಾನ ಈ ರಾಷ್ಟ್ರದ ಸಾಮಾಜಿಕ ಸಾಂಸ್ಕತಿಕ ವೈವಿಧ್ಯತೆ ಮತ್ತು ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ ಎಂದು ಹೆಸರಾಗಿದೆ. ಭಾರತದ ಸಂವಿಧಾನವು ಪ್ರಜಾಪ್ರಭುತ್ವ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಪ್ರತಿಪಾದಿಸುತ್ತದೆ. ಇದುವೇ ನಮ್ಮ ದೇಶದ ಆಡಳಿತ ವ್ಯವಸ್ಥೆಯ ತಳಹದಿ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ