Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

IPL Retention 2024: ಲಕ್ನೋ ಸೂಪರ್‌ ಜೈಂಟ್ಸ್‌ ಉಳಸಿಕೊಂಡ, ಕೈಬಿಟ್ಟ ಆಟಗಾರರ ಪಟ್ಟಿ

2024 ರ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಡಿಸೆಂಬರ್ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸುತ್ತೆ ಎಂಬುದನ್ನು ಪ್ರಕಟಿಸಲು ಇಂದು (ನವೆಂಬರ್ 26) ಸಂಜೆ 4 ಗಂಟೆಯೇ ಡೆಡ್‌ಲೈನ್ ಆಗಿತ್ತು.

ಈ ಸಮಯದ ಗಡುವು ಈಗ ಮುಕ್ತಾಯವಾಗಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ ಹಾಗೂ ಯಾವ ಆಟಗಾರರನ್ನು ರಿಲೀಸ್ ಮಾಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ಲಕ್ನೋ ಸೂಪರ್‌ ಜೈಂಟ್ಸ್‌ ಫ್ರಾಂಚೈಸಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡಿದೆ ಹಾಗೂ ಯಾವೆಲ್ಲಾ ಆಟಗಾರರಿಗೆ ಕೊಕ್ ಕೊಟ್ಟಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಉಳಿಸಿಕೊಂಡ ಆಟಗಾರರು : ಕೆ.ಎಲ್‌ ರಾಹುಲ್‌ (ನಾಯಕ), ಕ್ವಿಂಟನ್‌ ಡಿ ಕಾಕ್‌, ನಿಕೋಲಸ್‌ ಪೂರನ್‌, ಆಯುಷ್‌ ಬದೋನಿ, ಕೈಲ್‌ ಮೇಯರ್ಸ್‌, ಮಾರ್ಕಸ್‌ ಸ್ಟೋಯ್ನಿಸ್‌, ದೀಪಕ್‌ ಹೂಡಾ, ದೇವ್‌ದತ್‌ ಪಡಿಕ್ಕಲ್‌, ರವಿ ಬಿಷ್ನೋಯಿ, ನವೀನ್‌ ಹುಲ್‌ ಹಕ್‌, ಕೃನಾಲ್‌ ಪಾಂಡ್ಯ, ಯುದ್‌ವೀರ್‌ ಸಿಂಗ್‌, ಪ್ರೇರಕ್‌, ಯಶ್‌ ಠಾಕೂರ್‌, ಮರ್ಕ್‌ ವುಡ್‌, ಮಾಯಾಂಕ್‌ ಯಾದವ್‌, ಮೋಸಿನ್‌ ಖಾನ್‌,

ಬಿಡುಗಡೆಗೊಂಡ ಆಟಗಾರರು : ಜೈದೇವ್‌ ಉನಾದ್ಕಟ್‌, ಡೇನಿಯಲ್‌ ಸ್ಯಾಮ್ಸ್‌, ಮನನ್‌ ವೊಹ್ರಾ, ಸ್ವಾಪ್ನಿಲ್‌ ಸಿಂಗ್‌, ಕರಣ್‌ ಶರ್ಮಾ, ಅರ್‌ಪ್ರಿತ್‌ ಗುಲೇರಿಯಾ, ಸುಯೇಶ್‌, ಕರುಣ್‌ ನಾಯರ್‌,

ರಾಜಸ್ತಾನ್‌ ರಾಯಲ್ಸ್‌ನ ಎಡಗೈ ಬ್ಯಾಟರ್‌ ದೇವ್‌ದತ್‌ ಪಡಿಕ್ಕಲ್‌ ಅವರನ್ನು ಬದಲಿ ಆಟಗಾರರ ಪೈಕಿ ಎಲ್‌ಎಸ್‌ಜಿ ತಂಡ ಆವೆಶ್‌ ಖಾನ್‌ ಅವರನ್ನು ರಾಜಸ್ತಾನ್‌ಗೆ ಬಿಟ್ಟುಕೊಟ್ಟು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ