Mysore
31
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

IPL Retention 2024: 12 ಆಟಗಾರರನ್ನು ಕೈಬಿಟ್ಟ ಕೊಲ್ಕತ್ತಾ; ತಂಡದಲ್ಲಿ ಉಳಿದದ್ದು ಇವರು ಮಾತ್ರ

ಮುಂದಿನ ಮಾರ್ಚ್‌ ತಿಂಗಳಿನಲ್ಲಿ ಆರಂಭವಾಗಲಿರುವ 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಲುವಾಗಿ ಡಿಸೆಂಬರ್‌ 19ರಂದು ದುಬೈನಲ್ಲಿ ಮಿನಿ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಲಾಗಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಹಾಗೂ ಯಾವ ಆಟಗಾರರನ್ನು ಬಿಡುಗಡೆಗೊಳಿಸುತ್ತೆ ಎಂಬುದನ್ನು ಪ್ರಕಟಿಸಲು ಇಂದು ( ನವೆಂಬರ್‌ 26 ) ಸಂಜೆ 4 ಗಂಟೆಯೇ ಡೆಡ್‌ಲೈನ್‌ ಆಗಿತ್ತು.

ಈ ಸಮಯದ ಗಡುವು ಈಗ ಮುಕ್ತಾಯವಾಗಿದ್ದು, ಯಾವ ತಂಡಗಳು ಯಾವ ಆಟಗಾರರನ್ನು ರಿಟೈನ್‌ ಮಾಡಿಕೊಂಡಿವೆ ಹಾಗೂ ಯಾವ ಆಟಗಾರರನ್ನು ರಿಲೀಸ್‌ ಮಾಡಿವೆ ಎಂಬ ಮಾಹಿತಿ ಹೊರಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ನೀಡಿದೆ ಹಾಗೂ ಯಾವೆಲ್ಲಾ ಆಟಗಾರರಿಗೆ ಕೊಕ್‌ ಕೊಟ್ಟಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಉಳಿಸಿಕೊಂಡ ಆಟಗಾರರು: ನಿತಿಶ್‌ ರಾಣಾ, ರಿಂಕು ಸಿಂಗ್‌, ರಹ್ಮನುಲ್ಲಾ ಗುಬ್ರಜ್‌, ಶ್ರೇಯಸ್‌ ಅಯ್ಯರ್‌, ಜೇಸನ್‌ ರಾಯ್‌, ಸುನಿಲ್‌ ನರೇನ್‌, ಸುಯಶ್‌ ಶರ್ಮಾ, ಅನುಕುಲ್‌ ರಾಯ್‌, ಆಂಡ್ರೆ ರಸೆಲ್‌, ವೆಂಕಟೇಶ್‌ ಅಯ್ಯರ್‌, ಹರ್ಷಿತ್‌ ರಾಣಾ, ವೈಭವ್‌ ಅರೋರಾ ಹಾಗೂ ವರುಣ್‌ ಚಕ್ರವರ್ತಿ.

ಬಿಡುಗಡೆಗೊಂಡ ಆಟಗಾರರು: ಶಕಿಬ್‌ ಅಲ್‌ ಹಸನ್‌, ಲಿಟನ್‌ ದಾಸ್‌, ಅರ್ಯ ದೇಸಾಯಿ, ಡೇವಿಡ್‌ ವೈಸ್‌, ಎನ್‌ ಜಗದೀಶನ್‌, ಮನ್‌ದೀಪ್‌ ಸಿಂಗ್‌, ಕೆ ಖೆರ್ಜೋಲಿಯಾ, ಶಾರ್ದೂಲ್‌ ಠಾಕೂರ್‌, ಲಾಕಿ ಫರ್ಗ್ಯುಸನ್‌, ಉಮೇಶ್‌ ಯಾದವ್‌, ಟಿಮ್‌ ಸೌದಿ ಹಾಗೂ ಜೆ ಚಾರ್ಲ್ಸ್.‌

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!