Mysore
29
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಪಘಾತಕ್ಕೀಡಾದವರ ರಕ್ಷಣೆ ಮಾಡಿ ಮಾನವೀಯತೆ ಮೆರೆದ ಶಮಿ

ನವದೆಹಲಿ : ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಮೊಹಮ್ಮದ್‌ ಶಮಿ ಅಪಘಾತಕ್ಕೀಡಾದ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ.

ಉತ್ತರಾಖಂಡದ ನೈನಿತಾಲ್‌ನ ಕಣಿವೆಯೋದರ ಬಳಿ ಕಾರೋಂದು ಅಫಘಾತಕ್ಕೀಡಾಗಿದೆ. ಅದೇ ದಾರಿಯಲ್ಲಿ ಸಾಗುತ್ತಿದ್ದ ಶಮಿಯವರು ಇದನ್ನು ಗಮನಿಸಿದ್ದು, ಆಪಘಾತಕ್ಕೆ ಸಿಲುಕಿ ಒದ್ದಾಡುತ್ತಿದ್ದವರನ್ನು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಕ್ಷಣೆಯ ವಿಡಿಯೋವನ್ನು ಶಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರು ತುಂಬಾ ಅದೃಷ್ಟಶಾಲಿ. ದೇವರು ಅವರಿಗೆ 2ನೇ ಜಿವನವನ್ನು ನೀಡಿದ್ದಾನೆ. ಅವರ ಕಾರು ಮೈನಿತಾಲ್‌ ಬಳಿ ಇರುವ ಬೆಟ್ಟದ ರಸ್ತೆಯಿಂದ ನನ್ನ ಕಾರಿನ ಬಳಿ ಬಂದು ಬಿದ್ದಿತ್ತು. ನಾವು ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದೇವೆ. ಇಂದು ಒಬ್ಬರ ಜೀವವನ್ನು ರಕ್ಷಿಸಿದ ಖುಷಿ ನನಗಿದೆ ಎಂದು ಬರೆದುಕೊಂಡಿದ್ದಾರೆ.

ಶಮಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬಿಳಿಯ ಬಣ್ಣದ ಕಾರೊಂದು ಕಂದಕಕ್ಕೆ ಉರುಳಿ ಬಿದ್ದಿದೆ. ಈ ವೇಳೆ ಅಪಘಾತಕ್ಕೆ ಸಿಲುಕಿದ್ದವರನ್ನು ಶಮಿ ರಕ್ಷಣೆ ಮಾಡಿ ಉಪಚರಿಸುತ್ತಿದ್ದಾರೆ. ಶಮಿ ಅವರ ಈ ಮಾನವೀಯ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಮಿ ಅವರು ನನಗೆ ಡ್ರೈವಿಂಗ್‌ ಎಂದರೆ ಅಚ್ಚುಮೆಚ್ಚು. ಬೈಕ್‌ ಮತ್ತು ಕಾರ್‌ ಓಡಿಸುವುದೆಂದರೆ ನನಗೆ ಬಹಳಾ ಇಷ್ಟ. ಆದರೇ ಟೀಂ ಇಂಡಿಯಗಾಗಿ ಆಟವಾಡಿದ ನಂತರ ಡ್ರೈವಿಂಗ್‌ ವೇಳೆ ನಾನೇನಾದರೂ ಗಾಯಗೊಂಡರೆ ಎಂಬ ಭಯ ಕಾಡಿತ್ತು. ಅಂದಿನಿಂದ ಬೈಕ್‌ ಓಡಿಸುವುದನ್ನು ಬಿಟ್ಟೆ ಎಂದು ಹೇಳಿಕೊಂಡಿದ್ದರು.

ಶಮಿ ಅವರು ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸಾಧನೆಯ ಶಿಖರವೇರಿದ ಅಪ್ರತಿಮ ಪ್ರತಿಭೆ. ಬದುಕಿನ ಏಳು ಬೀಳಿನಿಂದ ನೊಂದು ಸಾವಿನ ಹಾದಿ ಹಿಡಿಯಲು ಹೊರಟಿದ್ದ ಶಮಿ ಇದೀಗ ತನ್ನ ಅತ್ಯದ್ಭುತ ಪ್ರತಿಭೆಯಿಂದಲೇ ಹೊಸ ಜೀವನ ಕಂಡುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ