Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡ ಪ್ರತಾಪ್‌ ಸಿಂಹ

ಮೈಸೂರು : ಸಂಸದ ಪ್ರತಾಪ್‌ ಸಿಂಹ ಅವರು ಸಂಖ್ಯಾ ಶಾಸ್ತ್ರದ ಪ್ರಕಾರ ತಮ್ಮ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.

ಪ್ರತಾಪ್‌ ಸಿಂಹ ಅವರು ತಮ್ಮ ಇಂಗ್ಲಿಷ್ ಹೆಸರಿನಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದು, Prthap simha ಬದಲಿಗೆ Pratap simmha ಎಂದು ಬದಲಿಸಿಕೊಂಡಿದ್ದಾರೆ.

ಹೆಸರು ಬದಲಾವಣೆಯ ಕುರಿತಾತ ಮಾಹಿತಿಯನ್ನು ಪ್ರತಾಪ್‌ ಸಿಂಹ ಅಫಿಡೆವಿಟ್‌ ಮೂಲಕ ಘೋಷಣೆ ಮಾಡಿದ್ದಾರೆ.

ಹಲವಾರು ಜನರು ಜೋತಿಷ್ಯ, ನಾಮಬಲ, ಸಂಖ್ಯಾ ಶಾಸ್ತ್ರವನ್ನು ನಂಬುತ್ತಾರೆ. ಕೆಲವು ರಾಜಕಾರಣೀಗಳು ಹೀಗೆ ತಮ್ಮ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿರುವುದು ಇದೇ ಮೊದಲೇನಲ್ಲ. ಈ ಮುಂಚೆಯೂ ಕೂಡ ಕೆಲವು ರಾಜಕಾರಣಿಗಳು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಕೂಡ Yeddyurappa ಎಂದು ಇದ್ದ ತಮ್ಮ ಹೆಸರನ್ನು Yediyurappa ಎಂದು ಬದಲಾವಣೆ ಮಾಡಿಕೊಂಡಿದ್ದರು.

ಎಂಎಲ್‌ಸಿ ಎಚ್‌.ವಿಶ್ವನಾಥ್‌, ತಮಿಳುನಾಡಿನ ಮಾಜಿ ಸಿಎಂ ಜಯಲಲಿತ, ಸೇರಿದಂತೆ ಹಲವು ರಾಜಕಾರಣಿಗಳು ತಮ್ಮ ಹೆಸರಿನಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದರು. ಇದೀಗ ಆ ಸಾಲಿಗೆ ಸಂಸದ ಪ್ರತಾಪ್‌ ಸಿಂಹ ಕೂಡ ಸೇರಿಕೊಂಡಿದ್ದಾರೆ.

ಸಂಖ್ಯಾ ಶಾಸ್ತ್ರವು ಜ್ಯೋತಿಷ್ಯದ ಒಂದು ಪ್ರಕಾರವಾಗಿದೆ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತವಾಗಿ ಕಲೆ ಹಾಕಿದ ಅಂಕಿ ಸಂಖ್ಯೆಗಳ ಬಗ್ಗೆ ವಿಶ್ಲೇಷಣೆ ಕೊಡುವುದನ್ನು ಸಂಖ್ಯಾ ಶಾಸ್ತ್ರ ಎನ್ನಲಾಗುತ್ತದೆ.
ಪ್ರತಿಯೊಂದು ವರ್ಣಮಾಲೆಗೂ ಕೂಡ ಸಂಖ್ಯಾ ಮೌಲ್ಯವನ್ನು ನಿಗಧಿ ಪಡಿಸಲಾಗಿದೆ. ಅವುಗಳನ್ನು ಬಳಸಿಕೊಂಡು ಪದಗಳ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ.

ಸಂಖ್ಯೆಗಳು ಗ್ರಹಗಳಿಗೆ ಸಂಪರ್ಕ ಹೊಂದಿವೆ ಎನ್ನಲಾಗುತ್ತದೆ. ಪ್ರತಿಯೊಂದು ಸಂಖ್ಯೆಯೂ ಕೂಡ ಆಳುವ ಗ್ರಹವನ್ನು ಹೊಂದಿದೆ. ಅದರ ಮೂಲಕ ಗ್ರಹಗಳನ್ನು ನಿಯಂತ್ರಿಸುತ್ತದೆ. ಗ್ರಹಗಳಿಗೆ ಸಂಖ್ಯಾ ಸಂಬಂಧ ಹಾಗೂ ಸಂಪರ್ಕವು ಸಂಖ್ಯಾ ಶಾಸ್ತ್ರದ ಕೀಲಿಯಾಗಿದೆ.

ಸಂಖ್ಯಾ ಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಖ್ಯಾ ಶಾಸ್ತ್ರವು ಗ್ರೀಕ್‌, ಈಜಿಪ್ಟ್‌, ಚೀನಾ, ಬ್ಯಾಬಿಲೋನ್‌, ಭಾರತ ಸೇರಿದಂದಂತೆ ಅನೇಕ ನಾಗರೀಕತೆಗಳಲ್ಲಿ ಬಳಸಲ್ಪಟ್ಟಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!