ಲಕ್ನೋ : ಆಧ್ಯಾತ್ಮಿಕ ಸಾಧು ಟಿಎಲ್ ವಾಸ್ವಾದಿ ಅವರ ಜನ್ಮ ದಿನದ ಸ್ಮರಣಾರ್ಥ ಶನಿವಾರದಂದು ಎಲ್ಲಾ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಉಚ್ಚಲು ಉತ್ತರ ಪ್ರದೇಶ ಸರ್ಕಾದ ಆದೇಶಿಸಿದೆ ಎಂದು ದಿ ಹಿದೂ ವರದಿ ಮಾಡಿದೆ.
ಯುಪಿ ಸರ್ಕಾರದ ವಿಶೇಷ ಕಾರ್ಯದರ್ಶಿ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರ ಅಧಿಕೃತ ಹೇಳಿಕೆಯ ಪ್ರಕಾರ ಆದಿತ್ಯನಾಥ್ ಸರ್ಕಾರವು ನವೆಂಬರ್ 25 ನ್ನು “ನೋ ನಾನ್ ವೆಜ್ ಡೇ” ಎಂದು ಘೋಷಿಸಿದ್ದು ರಾಜ್ಯಾದ್ಯಂತ ಈ ಆದೇಶವನ್ನು ಪಾಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರವು ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಪದಾರ್ಥಗಳ ಮಾರಾಟ, ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಯನ್ನು ನಿಷೇಧಿಸಿದ ಕೆಲವು ದಿನಗಳ ಬೆನ್ನಲ್ಲೇ ಈ ಆದೇಶ ಹೊರಡಿಸಿದ್ದಾರೆ.