Mysore
18
clear sky

Social Media

ಶನಿವಾರ, 03 ಜನವರಿ 2026
Light
Dark

ಮೊದಲ ಟಿ೨೦: ಆಸೀಸ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ವಿಶಾಖಪಟ್ಟಣಂ : ಭಾರತ ತಂಡದ ಸಂಘಟಿತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮುಂದೆ ಮಂಕಾದ ಆಸೀಸ್‌ ತಂಡವು ಮೊದಲ ಟಿ೨೦ ಪಂದ್ಯದಲ್ಲಿ ಸೋಲನುಭವಿಸಿದೆ.

ಇಲ್ಲಿನ ವೈ ಎಸ್‌ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟಿ೨೦ ಪಂದ್ಯದಲ್ಲಿ ಭಾರತ ತಂಡ ೨ ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಆಸ್ಟ್ರೇಲಿಯಾ ತಂಡ ನೀಡಿದ ೨೦೮ ರನ್‌ ಗುರಿ ಬೆನ್ನಟ್ಟಿದ ಭಾರತ ತಂಡ ೨ ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ತಂಡ ೩೧ ರನ್‌ ಗಳಿಸಿದ್ದಾಗ ರವಿ ಬಿಷ್ಣೋಯಿ ಅವರ ಮೊದಲ ಓವರ್‌ನಲ್ಲಿಯೇ ಮ್ಯಾಥ್ಯೂ ಶಾರ್ಟ್‌ (೧೩) ಕ್ಲೀನ್‌ ಬೋಲ್ಡ್‌ ಆಗಿ ಹೊರನಡೆದರು. ನಂತರ ಜೊತೆಯಾದ ಸ್ಟೀವ್‌ ಸ್ಮಿತ್‌ ಹಾಗೂ ಜೋಶ್‌ ಇಂಗ್ಲಿಸ್‌ ಮುರಿಯದ ೧೩೦ ರನ್‌ಗಳ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ಜೋಶ್‌ ಇಂಗ್ಲಿಸ್‌ ತಾವೆದುರಿಸಿದ ೫೦ ಎಸೆತಗಳಲ್ಲಿ ೧೧ ಬೌಂಡರಿ ಹಾಗೂ ೮ ಸಿಕ್ಸರ್‌ ಸಹಿತ ೧೧೦ ರನ್‌ ಕಲೆ ಹಾಕಿದರು. ಇತ್ತ ಸ್ಟೀವ್‌ ಸ್ಮಿತ್‌ ೪೧ ಎಸೆತಗಳಲ್ಲಿ ೮ ಬೌಂಡರಿ ಸಹಿತ ೫೨ ರನ್‌ ಕಲೆಹಾಕಿ ತಂಡ ೨೦೦ ಗಡಿ ದಾಟಲು ಸಹಕರಿಸಿದರು.

ನಂತರ ಬಂದ ಸ್ಟೋಯ್ನಿಸ್‌ (೭), ಟಿಮ್‌ ಡೇವಿಡ್‌(೧೯) ರನ್‌ ಗಳಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ೨೦ ಓವರ್‌ಗಳಲ್ಲಿ ೩ ವಿಕೆಟ್‌ ಕಳೆದುಕೊಂಡು ೨೦೮ರನ್‌ ಗಳಿಸಿ ಎದುರಾಳಿಗೆ ಸ್ಪರ್ಧಾತ್ಮಕ ಟಾರ್ಗೆಟ್‌ ನೀಡಿದರು.

ಭಾರತ ಪರ ರವಿ ಬಿಷ್ಣೋಯಿ ಹಾಗೂ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ತಲಾ ೧ ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ ತಂಡ ನೀಡಿದ ೨೦೮ ರನ್‌ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಖಾತೆ ತೆರೆಯದೇ ಆರಂಭಿಕ ಆಟಗಾರ ಋತುರಾಜ್‌ (೦) ಕ್ಕೆ ಔಟಾದರು. ಯಶಸ್ವಿ ಜೈಸ್ವಾಲ್‌ (೨೧) ರನ್‌ಗಳಿಸಿ ನಿರ್ಗಮಿಸಿದರು.

ಇಶಾನ್‌ ಕಿಸಾನ್‌ ಹಾಗೂ ನಾಯಕ ಸೂರ್ಯಕುಮಾರ್‌ ಯಾದವ್‌ ಅವರ ಜೋಡಿ ಮುರಿಯದ ೧೧೦ ರನ್‌ಗಳ ಜೊತೆಯಾಟ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಇಶಾನ್‌ ೩೯ ಎಸೆತಗಳಲ್ಲಿ ೨ ಬೌಂಡರಿ ಹಾಗೂ ೫ ಸಿಕ್ಸರ್‌ ಸಹಿತ ೫೮ ರನ್‌ ಬಾರಿಸಿದರೆ, ನಾಯಕ ಸೂರ್ಯಕುಮಾರ್‌ ಯಾದವ್‌ ಕೇವಲ ೪೨ ಎಸೆತಗಳಲ್ಲಿ ೯ ಬೌಂಡಿರಿ ಹಾಗೂ ೪ ಸಿಕ್ಸರ್‌ ಮೂಲಕ ೮೦ ರನ್‌ ಬಾರಿಸಿ ತಂಡಕ್ಕೆ ಆಸರೆಯಾದರು.

ಕೊನೆಯಲ್ಲಿ ಮ್ಯಾಚೆಎ ವಿನ್ನಿಂಗ್‌ ಆಟವಾಡಿದ ರಿಂಕು ಸಿಂಗ್‌ ೨೨ ರನ್‌ ಬಾರಿ ತಂಡಕ್ಕೆ ಜಯ ತಂದು ಕೊಟ್ಟರು.

ಆಸ್ಟ್ರೇಲಿಯಾ ಪರ ತನ್ವೀರ್‌ ಸಂಘ ೨, ಮ್ಯಾಥ್ಯೂ ಶಾರ್ಟ್‌, ಜಾಸನ್‌ ಬೆಹ್ರೆನ್‌ಡ್ರಾಫ್‌ ತಲಾ ಒಂದು ವಿಕೆಟ್‌ ಪಡೆದರು.

ಪಂದ್ಯ ಶ್ರೇಷ್ಠ : ಸೂರ್ಯಕುಮಾರ್‌ ಯಾದವ್‌.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!